ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಂಜಾಲಕಟ್ಟೆ: ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಪುಂಜಾಲಕಟ್ಟೆ: ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ


ಪುಂಜಾಲಕಟ್ಟೆ: ಸರಕಾರಿ ಪ್ರಥಮದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ಆಶ್ರಯದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಇಂದು (ಜ.25) ಹಿರಿಯ ವಿದ್ಯಾರ್ಥಿಗಳಿಗೆ 'ಅಭಿನಂದನಾ ಕಾರ್ಯಕ್ರಮವನ್ನು' ನಡೆಸಲಾಯಿತು.


ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಹಿಂದಿನ ವಿದ್ಯಾರ್ಥಿ ನಾಯಕರಾಗಿದ್ದ ಮುಹಮ್ಮದ್ ಮುನೀರ್, ಶ್ರಾವ್ಯ, ಉತ್ತಮ್, ವಾಸುದೇವ ಮತ್ತು ಅಕ್ಷಿತಾ ರವರು ಆಗಮಿಸಿ ತಮ್ಮ ಸೇವಾನುಭವವನ್ನು ಹಾಗೂ ಕಿರಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾಲೇಜಿನ ರೇಂಜರ್ ವಿಭಾಗದ ಸಂಚಾಲಕರಾದ ಪ್ರೊ.ಪ್ರೀತಿ ಕೆ. ರಾವ್ ಅವರು ಹಿರಿಯ ವಿದ್ಯಾರ್ಥಿ ನಾಯಕರ ಕಾರ್ಯದಕ್ಷತೆಯ ಬಗೆಗೆ ಶ್ಲಾಘನೀಯ ನುಡಿಗಳನ್ನಾಡಿದರು.


ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರವಿಶಂಕರ್ ಬಿ. ಅವರು ಹಿರಿಯ ವಿದ್ಯಾರ್ಥಿ ನಾಯಕರಿಗೆ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು..


ಕಾರ್ಯಕ್ರಮದಲ್ಲಿ ಕಾಲೇಜಿನ ರೋವರ್ಸ್ ಘಟಕದ ಸಂಚಾಲಕರಾದ ಪ್ರೊ. ಆಂಜನೇಯ ಎಂ.ಎನ್. ಹಾಗೂ ಎಲ್ಲಾ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ರೋವರ್ ತರುಣ್ ಸ್ವಾಗತಿಸಿ ರೇಂಜರ್ ಸಮೀಕ್ಷಾ ಧನ್ಯವಾದವಿತ್ತರು. ರೇಂಜರ್ ಹರುಷ ಕಾರ್ಯಕ್ರಮ ನಿರೂಪಿಸಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post