ಪುಂಜಾಲಕಟ್ಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆಯಲ್ಲಿ ಸೋಮವಾರ (ಜ. 24) ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಒಂದು ದಿನದ ಪ್ರಥಮ ಚಿಕಿತ್ಸಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ದೇಶದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಅತೀ ಹೆಚ್ಚು ಮರಣಗಳು ತುರ್ತು ಚಿಕಿತ್ಸೆ ಸಿಗದೆ ನಡೆಯುತ್ತಿವೆ. ವಿದ್ಯಾರ್ಥಿಗಳು ತುರ್ತು ಚಿಕಿತ್ಸೆಯ ಬಗ್ಗೆ ಜ್ಞಾನವನ್ನು ಪಡೆಯಬೇಕು ಎಂದು SERV ತರಬೇತಿದಾರರು ಹಾಗೂ IRCSನ ದಕ್ಷಿಣ ಕನ್ನಡ ಜಿಲ್ಲೆಯ ಸದಸ್ಯರೂ ಆದ ಎಂ. ಆರ್ ಅಶ್ವಿನ್ ರವರು ತಿಳಿಸಿದರು.
ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಮತ್ತು ಕಾರ್ಯಕ್ರಮದ ಅಧ್ಯಕ್ಷರು ಉದ್ಘಾಟನೆ ಮಾಡಿದರು. ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಪ್ರೊ. ಗೀತಾರವರು ಪ್ರಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದ ಪ್ರಾಂಶುಪಾಲರಾದ ರವಿಶಂಕರ್ ಬಿ ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಕ್ಷೀಯ ಭಾಷಣವನ್ನು ಆಡಿದ ಅವರು, ತುರ್ತು ಚಿಕಿತ್ಸಾ ಕ್ರಮವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಪ್ರತಿಯೊಬ್ಬರು ಇನ್ನೊಂದು ಜೀವವನ್ನು ಉಳಿಸುವಂತೆ ಆಗಬೇಕುಎಂದು ಹೇಳಿದರು.
IQAC ಮುಖಸ್ಥ ಪ್ರೊ ಡಾ.ಲೊಕೇಶ್, ಪ್ರೊ.ರಾಜೇಶ್ಚರಿ, ಪ್ರೊ.ಆಂಜನೇಯ, ರೆಡ್ ಕ್ರಾಸಿನ ಸಹ ಸಂಚಾಲಕರಾದ ಪ್ರೊ. ಶೇಖರ್ ಹಾಗೂ ಇತರ ಉಪನ್ಯಾಸಕ ವೃಂದದವರು ರೆಡ್ ಕ್ರಾಸ್ ನ ನಾಯಕಿ ರಾಫಿಯಾ ನಾಯಕ ಕಿರಣ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಂದ್ರಿಕಾ ಸ್ವಾಗತಿಸಿದರು. ಅಖಿಲೇಶ್ ವಂದಿಸಿದರು. ಶ್ರಾವ್ಯ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment