ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೋಮ ಸಪರ್ಯಾ ಯಾಗಕ್ಕೆ ಸಿದ್ಧತೆ: ಬಜಕೂಡ್ಲು ಗೋಶಾಲೆಯಲ್ಲಿ ಬೆರಣಿ ತಟ್ಟುವ ಸೇವಾ ಅರ್ಘ್ಯ

ಸೋಮ ಸಪರ್ಯಾ ಯಾಗಕ್ಕೆ ಸಿದ್ಧತೆ: ಬಜಕೂಡ್ಲು ಗೋಶಾಲೆಯಲ್ಲಿ ಬೆರಣಿ ತಟ್ಟುವ ಸೇವಾ ಅರ್ಘ್ಯ


ಪೆರ್ಲ: ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಕರಕಮಲಗಳಿಂದ ಪ್ರದೋಷ ಕಾಲದಲ್ಲಿ ಪರಮಪೂಜ್ಯರಿಂದ ಹೊಸನಗರ ಶ್ರೀ ಚಂದ್ರಮೌಳೀಶ್ವರ ದೇವರ (28.02.2022) ಸೋಮ-ಸಪರ್ಯಾ ಆರಾಧನೆಗಾಗಿ 22.01.2022ನೇ ಶನಿವಾರ ಅಮೃತಧಾರಾ ಗೋಶಾಲೆ ಬಜಕೂಡ್ಲುವಿನಲ್ಲಿ ವಿಶೇಷ ವಿಭೂತಿ ಪೂಜೆಗಾಗಿ ಬೆರಣಿ ತಟ್ಟುವ ಸೇವಾ ಅರ್ಘ್ಯವು ಗುರುವಂದನೆ ಗೋವಂದನೆ ಮೂಲಕ ಸಂಪನ್ನಗೊಂಡಿತು.


ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಇವರ ನೇತೃತ್ವದಲ್ಲಿ ಕಾಸರಗೋಡು ನಗರ ಮಾತೃತ್ವಮ್ ಅಧ್ಯಕ್ಷೆ ಕುಸುಮ ಪೆರ್ಮುಖ, ಕಾರ್ಯದರ್ಶಿ ಗೀತಾ ಲಕ್ಷ್ಮೀ ಮುಳ್ಳೇರಿಯಾ, ಕೋಶಾಧಿಕಾರಿ ಶಿವಕುಮಾರಿ ಕುಂಚಿನಡ್ಕ, ಕಾಸರಗೋಡು ನಗರ ಮಾತೃತ್ವಮ್ ಸದಸ್ಯರು, ಮಹನೀಯರು, ಮಾತೆಯರು, ಮಕ್ಕಳು ಸೇರಿ 2000 ಕ್ಕಿಂತಲೂ ಅಧಿಕ ಬೆರಣಿಯನ್ನು ತಟ್ಟಲಾಯಿತು. ಅಮೃತಧಾರ ಗೋಶಾಲೆಯ ಪದಾಧಿಕಾರಿಗಳು ಸಿಬ್ಬಂದಿಗಳು, ಸಣ್ಣ ಸಣ್ಣ ಮಕ್ಕಳು ತುಂಬಾ ಖುಷಿಯಿಂದ ಬೆರಣಿ ತಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.  


ಚಲಿಸುವ ಗೋಆಲಯ ಪ್ರಖ್ಯಾತಿಯ ಶ್ರೀ ಗಣೇಶ ಭಟ್ ಮುಣ್ಚಿಕಾನ ಇವರು ಎಲ್ಲರಿಗೂ ಕಬ್ಬಿನ ಹಾಲಿನಿಂದ ತಯಾರಿಸಿದ ದೋಸೆ ಮತ್ತು ಚಟ್ನಿಯನ್ನು ತಯಾರಿಸಿ ವಿತರಿಸಿದರು. ಗೋಶಾಲೆಯ ವತಿಯಿಂದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಿದರು.

-ವರದಿ: ಗೀತಾ ಲಕ್ಷ್ಮಿ 


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم