ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಪರಾರಿ' ರಸ್ತೆ ಕಾಮಗಾರಿ, ಮುಗಿಯೋದು ಯಾವಾಗ ರೀ? ಜನಪ್ರತಿನಿಧಿಗಳು ಪರಾರಿ..?

'ಪರಾರಿ' ರಸ್ತೆ ಕಾಮಗಾರಿ, ಮುಗಿಯೋದು ಯಾವಾಗ ರೀ? ಜನಪ್ರತಿನಿಧಿಗಳು ಪರಾರಿ..?


ಮಣಿಪಾಲ ಡಿಸಿ ಆಫೀಸ್ ಹತ್ತಿರದ ಪೆರಂಪಳ್ಳಿ ಮಾರ್ಗ ಮಧ್ಯ ಶೀಂಬ್ರ ಗಣಪತಿ ದೇವಸ್ಥಾನದ ಮಾರ್ಗವಾಗಿ ಪರಾರಿ ಸೇತುವೆ ಮೂಲಕ ಕೊಳಲಗಿರಿ- ಹಾವಂಜೆಗೆ ಹೋಗುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಆ ರಸ್ತೆ ಮೂಲಕ ಸಾಗುವಾಗ ಇಂದಿರಾ ಶಿವರಾವ್ ಪಾಲಿಟೆಕ್ನಿಕ್, ಮೂಡುಪೆರಂಪಳ್ಳಿ, ಎಂಬ ತಾಂತ್ರಿಕ ಶಿಕ್ಷಣ ಕೇಂದ್ರ ಇದ್ದು, ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಊರಿನ ಸಮಸ್ತ ನಾಗರಿಕರು ಈ ರಸ್ತೆಯನ್ನು ಅವಲಂಬಿಸಿರುತ್ತಾರೆ.


ಹದಗೆಟ್ಟಿರುವ ರಸ್ತೆ ಮತ್ತು ಧೂಳಿನಿಂದ ಈ ರಸ್ತೆಯಲ್ಲಿ ಸಂಚರಿಸುವುದು ಬಲು ಕಷ್ಟದಾಯಕವಾಗಿರುತ್ತದೆ. ಇದನ್ನೆಲ್ಲಾ ನೋಡಿಯೂ ಈ ಊರಿನ ಶಾಸಕರು, ಸಂಸದರು ಕಣ್ಣು ಮುಚ್ಚಿ ಕುಳಿತಿರುವುದು ತೀರಾ ದುರದೃಷ್ಟಕರದ ಸಂಗತಿ.

- ಶ್ರೀನಾಥ್ ನಾಯಕ್‌, ಮಣಿಪಾಲ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم