ಬದಿಯಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಕ್ಕಾಗಿ ನಡೆಸಿ ಬರುತ್ತಿರುವ ಪ್ರದೋಷಾಚರಣೆಯು ಶನಿವಾರ (ಜ.29) ಚಂದ್ರಗಿರಿ ವಲಯದ ಕುಳೂರು ಘಟಕದ ಕೈಪ್ಪಂಗಳ ವೆಂಕಟರಮಣ ಭಟ್ಟರ ಮನೆಯಲ್ಲಿ ವಲಯ ವೈದಿಕ ಪ್ರಧಾನ ಪಯ ವೇ ಮೂ ಶ್ಯಾಮಕುಮಾರ ಭಟ್ಟರ ನೇತೃತ್ವದಲ್ಲಿ ವಲಯದ ರುದ್ರಾಧ್ಯಾಯಿಗಳ ಸಹಯೋಗದಲ್ಲಿ ರುದ್ರಾಭಿಷೇಕ ಪುರಸ್ಸರ ಪ್ರದೋಷ ಪೂಜೆ ನೆರವೇರಿತು.
ಮಾತೆಯರು ಕುಂಕುಮಾರ್ಚನೆ ನೆರವೇರಿಸಿದರು. ಎಲ್ಲರೂ ಶಿವಮಾನಸಪೂಜಾ ಸ್ತೋತ್ರ ಪಠನ ಮಾಡಿದರು. ಮನೆಯ ಕುಲಪುರೋಹಿತರಾದ ತುಪ್ಪೆಕಲ್ಲು ವೇ. ಮೂ ಕುಮಾರಸುಬ್ರಹ್ಮಣ್ಯ ಭಟ್ಟರ ನೇತೃತ್ವದಲ್ಲಿ ದುರ್ಗಾ ಪೂಜೆ ನೆರವೇರಿತು.
ಶಾಸನತಂತ್ರದ ಪ್ರಕಲ್ಪಖಂಡದ ಉಪಖಂಡ ನಿರ್ಮಾಣದ ಶ್ರೀ ಸಂಯೋಜಕ ಮತ್ತು ವಿವಿವಿಯ ನಿರ್ಮಿತಿ ಪರಿಷತ್ತಿನ ನಿರ್ಮಾಣ ವಿಭಾಗದ ಪ್ರಧಾನ ಸಂಚಾಲಕರಾದ ಬೆಳ್ಳಿಗೆ ಕೆ ನಾರಾಯಣ ಭಟ್ಟರು ಶ್ರೀಗುರುಗಳ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ವಿ ವಿ ವಿ ವಿಚಾರದಲ್ಲಿ ಎಲ್ಲಾ ವಿಧವಾದ ಸಹಕಾರ ಕೊಡಬೇಕಾದ್ದು ಪ್ರತಿಯೊಬ್ಬ ಶಿಷ್ಯ ಬಿಂದುವಿನ ಕರ್ತವ್ಯವಾಗಿದೆ ಎಂದೂ ಮುಳ್ಳೇರಿಯಾ ಮಂಡಲದಲ್ಲಿನ ಸಮರಸ ಯೋಜನೆಯು ಶ್ರೀಗುರುಗಳ ಆಶಯದಂತೆ ಮಂಡಲದ ಕೇಂದ್ರಬಿಂದು ಆಗಬೇಕೆಂದೂ, ಅಲ್ಲಿ ಮೊಕ್ಕಾಮು ಇದ್ದು ಎಲ್ಲರನ್ನು ಅನುಗ್ರಹಿಸುವಂತಾಗ ಬೇಕೆಂದೂ, ಈ ವಿಚಾರದಲ್ಲಿ ಎಲ್ಲರೂ ಸರ್ವವಿಧದ ಸಹಕಾರ ಕೊಡಬೇಕೆಂದು ಕರೆಯಿತ್ತರು.
ಈ ಸಂದರ್ಭದಲ್ಲಿ ವಿವಿವಿ, ಸಮರಸ ಯೋಜನೆ, ಗೋಸೇವೆ, ವೇದನಿಧಿಗಳಿಗೆ ಸಮರ್ಪಣೆ ನಡೆಯಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment