ಮುಡಿಪು: ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಪಿದಮಲೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ಭಾನುವಾರ ಸಂಜೆ ಮುಡಿಪಿನಿಂದ ಪಿದಮಲೆ ತನಕ ನಡೆಯಿತು.
ಶ್ರೀ ಕ್ಷೇತ್ರ ಮುಡಿಪಿನ್ನಾರಿನಿಂದ ಹೊರಟ ಮೆರವಣಿಗೆಗೆ ಆರಂಭದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಕುರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಶಾಂತ ಕಾಜವ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ ಆಳ್ವ ಕೂವೆತ್ತಬೈಲು ಮತ್ತಿತರರು ದೀಪ ಪ್ರಜ್ವಲನೆ ಮಾಡಿದರು.
ಸಮಿತಿ ಗೌರವಾಧ್ಯಕ್ಷ ಕಿಶೋರ್ ಕುಮಾರ್ ನಾಗುರಿ, ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ನಾಯಕ್ ಕುರ್ನಾಡು, ದೇವಸ್ಥಾನ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಯು.ಸದಾನಂದ ನಾಯಕ್ ಹೊಸಬೆಟ್ಟು, ಅಧ್ಯಕ್ಷ ಉಮೇಶ್ ನಾಯಕ್ ಮೂಳೂರು, ಕಾರ್ಯದರ್ಶಿ ವೆಂಕಟರಮಣ ನಾಯಕ್ ಪುತ್ತೂರು, ಕೋಶಾಧಿಕಾರಿ ಗೋಪಾಲ ನಾಯಕ್ ಕಟ್ಟೆಮಾರ್ ಸಹಿತ ವಿವಿಧ ಸಮಿತಿಗಳ ಪ್ರಮುಖರು ಹಾಜರಿದ್ದರು.
ಮೆರವಣಿಗೆಯು ಕಾಯರ್ ಗೋಳಿ, ಮಿತ್ತಕೋಡಿ, ಪಡೀಲ್, ಬೋಳಿಯಾರು, ಕುರ್ನಾಡು, ಅಂಗಣೆಮಾರು ಮೂಲಕ ಪಿದಮಲೆ ಕ್ಷೇತ್ರಕ್ಕೆ ಆಗಮಿಸಿತು. ನಾಸಿಕ್ ಬ್ಯಾಂಡ್, ಚೆಂಡೆ ವಾದನ, ಬ್ಯಾಂಡ್ ಸೆಟ್, ಭಜನೆ ಮತ್ತಿತರ ವೈಭವದೊಂದಿಗೆ ಮೆರವಣಿಗೆ ಸಂಪನ್ನಗೊಂಡಿತು. ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜ.31ರಿಂದ ಫೆ.4ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದದಿಗೆ ನಡೆಯಲಿವೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment