ರಾಮನಗರದಲ್ಲಿ ಬಹು ಮುಖ್ಯವಾದ ಎರಡು ಕಾರ್ಯಕ್ರಮ. ಸಂವಿಧಾನದ ಶಿಲ್ಪಿ ಎಂದೇ ಖ್ಯಾತರಾದ ಬಿ.ಆರ್. ಅಂಬೇಡ್ಕರ್ ಮತ್ತು ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಕೆಂಗಲ್ ಹನುಮಂತಯ್ಯ ನವರ ಪುತ್ತಳಿ ಪ್ರತಿಮೆ ಅನಾವರಣ. ನಾಡಿನ ದೊರೆ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಥಮ ಬಾರಿಗೆ ರಾಮನಗರಕ್ಕೆ ಆಗಮನ.
ಈ ಸುವರ್ಣ ಸಂದರ್ಭದಲ್ಲಿ ಏನು ಆಗಬಾರದಿತ್ತೊ ಅದನ್ನೆಲ್ಲವನ್ನೂ ಮಾಡಿ ತೇೂರಿಸಿದವರು ಘನತೆ?ವೆತ್ತ ಸಂಸದರು ಮತ್ತು ಮಂತ್ರಿವರ್ಯರು ಹಾಗೂ ಒಂದಿಷ್ಟು ರಾಜಕೀಯ ಪುಡಾರಿಗಳು. ಇಡೀ ರಾಜ್ಯದ ಜನತೆ ತಲೆ ತಗ್ಗಿಸ ಬೇಕಾದ ರಾಜಕೀಯ ರಂಪಾಟಕ್ಕೆ ಕಾರಣಕರ್ತರು ಯಾರು? ಅನ್ನುವುದು ನಮ್ಮ ಮುಂದಿರುವ ಪ್ರಶ್ನೆ
ಇದೊಂದು ಸರಕಾರಿ ಕಾರ್ಯಕ್ರಮ ಅನ್ನುವುದನ್ನು ಮರೆತು ರಾಜಕೀಯ ಪಕ್ಷಗಳ ಸಾಧನೆಯ ಸಮಾವೇಶ ಅನ್ನುವ ತರದಲ್ಲಿ ಕಾರ್ಯಕ್ರಮ ರೂಪಿಸಿರುವುದು ಮೊದಲ ತಪ್ಪು. ಮಾತ್ರವಲ್ಲ ಇಂತಹ ಮೈಕೈ ಜಗ್ಗಾಟಕ್ಕೆ ಹೆಸರುವಾಸಿ ಅನ್ನಿಸಿಕೊಂಡ ಈ ಪವಿತ್ರ ಕ್ಷೇತ್ರದಲ್ಲಿ. ಕಾರ್ಯಕ್ರಮ ಆಯೇೂಜಿಸುವ ಮೊದಲೇ ಸ್ವಲ್ಪ ಆಲೇೂಚನೆ ಮಾಡಬೇಕಿತ್ತು.
ಸಭೆಯ ಪ್ರಾರಂಭದ ಸಂದರ್ಭದಲ್ಲಿಯೇ ಒಂದಿಷ್ಟು ಕಾಂಗ್ರೆಸ್ ಕಾರ್ಯಕರ್ತರು ಗಲಾಟೆಯ ಧ್ವನಿಯನ್ನು ಎಬ್ಬಿಸಿದ್ದರು. ಅದು ಕೂಡಾ ಮುಖ್ಯಮಂತ್ರಿಗಳ ಉಪಸ್ಥಿತಿಯ ಸಮಾರಂಭದಲ್ಲಿಯೇ ಇದು ಕೂಡಾ ಅತ್ಯಂತ ಬೇಸರದ ನಡೆ. ಮತ್ತೆ ಮಾತಿಗೆ ಬಂದ ಮಂತ್ರಿ ಗಳಾದ ಅಶ್ವಥ್ ನಾರಾಯಣರು ಸ್ವಲ್ಪ ಖಾರವಾಗಿಯೇ ವಿಪಕ್ಷದವರನ್ನು ಜರಿಯುವ ತರದಲ್ಲಿ ಮಾತಿನ ವರಸೆ ಇತ್ತು. ಇದನ್ನು ಸಹಿಸದ ಡಿ.ಕೆ. ಸುರೇಶ್ ಕಾಲು ಕೆದರಿಕೊಂಡು ಅಸಂಸದಿಯ ನಡೆಯಲ್ಲಿ ವೇದಿಕೆಯಲ್ಲಿ ತಮ್ಮ ರಂಪಾಟದ ಬುದ್ಧಿ ತೇೂರಿಸಿ ಬಿಟ್ಟರು.
ಆದರೆ ನಾನು ಈ ಸಂದರ್ಭದಲ್ಲಿ ಬಹುವಾಗಿ ಮೆಚ್ಚಿಕೊಂಡಿದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರ ನಡೆ. ಸಮಯಕ್ಕೆ ಸರಿಯಾಗಿ ಯಾವುದೇ ಯಾವುದೇ ತರದಲ್ಲಿ ಸ್ವಲ್ಪವೂ ಸಹನೆ ಕಳೆದುಕೊಳ್ಳದೆ ಲಘವಾದ ಧಾಟಿಯಲ್ಲಿ ಸಂಸದರಿಗೂ ಮಂತ್ರಿಗಳಿಗೂ ಮಾತಿನ ಮೂಲಕ ಮತ್ತು ಉಪಸ್ಥಿತರಿದ್ದ ಜನಪ್ರತಿನಿಧಿಗಳಿಗೆ ನವಿರಾದ ಮಾತಿನ ಮೂಲಕ ಚಾಟಿಯೇಟು ಬೀಸಿದ್ದಂತೂ ಹಿತವಾಗಿತ್ತು.
"ರಾಮನಗರಕ್ಕೆ ನಾನು ಬಂದಿರುವುದು ರಾಜಕೀಯ ಮಾಡಲು ಅಲ್ಲ ಬದಲಾಗಿ ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲು ಈ ನಿಟ್ಟಿನಲ್ಲಿ ರಾಮನಗರದ ನಕ್ಷೆಯಲ್ಲಿ ಗುರುತಿಸುವಂತಹ ಸಾಧನೆ ಮಾಡಿ ತೇೂರಿಸಿದ ಮಾಜಿ ಮುಖ್ಯಮಂತ್ರಿ ಕೆಂಗಲ್, ದೇವೇಗೌಡ, ಎಸ್.ಎಂ.ಕೃಷ್ಣ, ಸಿದ್ದರಾಮಣ್ಣನವರನ್ನು ನೆನಪಿಸಿ ಕೊಳ್ಳುವುದರ ಮೂಲಕ ಡಿ.ಕೆ.ಬ್ರದರ್ಸ್‌ಗಳಿಗೆ ರಾಮನಗರಕ್ಕೆ ನಿಮ್ಮ ಕೊಡುಗೆ ಅನ್ನುವುದನ್ನು ಮುಟ್ಟಿ ನೇೂಡಿಕೊಳ್ಳುವ ತರದಲ್ಲಿ ಮಾತನಾಡಿದ್ದು ಅವರ ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿಯಾಯಿತು. ಮಾತ್ರವಲ್ಲ ತಮ್ಮ ಸಚಿವರೆ ಮಾತನಾಡುವಾಗ ಪರಿಸ್ಥಿತಿ ಕೈ ಮೀರುತ್ತಿದೆ ಅನ್ನುವುದು ಅವರ ಮುಖ ಭಾವದಲ್ಲಿಯೇ ವ್ಯಕ್ತವಾಗುತ್ತಿತ್ತು. ಸಮಾಧಾನಿಸುವ ತರದಲ್ಲಿ ಡಿ.ಕೆ. ಸುರೇಶರವರ ಮತ್ತು ಅಶ್ವಥ್ ರವರ ಮುಖ ನೇೂಡಿದ್ದು ಕಣ್ಣು ಕಟ್ಟುವಂತಿತ್ತು.ಏನೇ ಆದರೂ ಮುಖ್ಯಮಂತ್ರಿ ಮಂತ್ರಿಗಳ ಸಮ್ಮುಖದಲ್ಲಿ ಈ ರೀತಿಯ ರಾಜಕೀಯ ರಂಪಾಟ, ಹೊಯ್ ಕೈ ಮೇಲಾಟ ನಡೆದಿರುವುದು ನಾಡಿನ ಪ್ರಬುದ್ಧ ಮತದಾರ ತಲೆ ತಗ್ಗಿಸುವಂತೆ ಮಾಡಿದೆ. ಒಬ್ಬ ಮುಖ್ಯಮಂತ್ರಿ ಅಂದರೆ ಇಡೀ ನಾಡಿನ ಮುಖ್ಯಮಂತ್ರಿ ಹೊರತು ಒಂದು ಜಾತಿ, ಪಕ್ಷ, ಜಿಲ್ಲೆಯ ಮುಖ್ಯಮಂತ್ರಿ ಅಲ್ಲ ಅನ್ನುವ ಸಾಮಾನ್ಯ ಪರಿಜ್ಞಾನ ನಮ್ಮ ಜನಪ್ರತಿನಿಧಿಗಳಿಗೆ ಇರಲೇ ಬೇಕು. ಇನ್ನು ಮುಂದೆ ಆದರೂ ಅಷ್ಟೇ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲರುಗಳು ಬರುವ ಕಾರ್ಯಕ್ರಮಗಳಿಗೆ ಇಂತಹ ಮುಖಛಾಯದ ಸಂಸದರನ್ನು ಆಮಂತ್ರಿಸುವಾಗ ಜಾಗ್ರತೆ ವಹಿಸುವುದು ಮುಖ್ಯ.
- ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق