ಮಂಗಳೂರು: ಯುವ ಸಮುದಾಯವು ಸ್ವಾಮಿ ವಿವೇಕಾನಂದರಂತೆ ರಾಷ್ಟ್ರೀಯತೆಯೇ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಮಂಗಳೂರು ಉತ್ತರ ಸಹಾಯಕ ಪೊಲೀಸ್ ಆಯಕ್ತ ಎಸ್.ಮಹೇಶ್ ಕುಮಾರ್ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮತ್ತು ಯುವ ರೆಡ್ ಕ್ರಾಸ್‌ಮಂಗಳೂರು ವಿಶ್ವವಿದ್ಯಾಲಯ ಇವುಗಳ ಜಂಟಿ ಸಹಭಾಗಿತ್ವದಲ್ಲಿ ಬುಧವಾರ ತಣ್ಣೀರುಬಾವಿಯ ವೃಕ್ಷ ಉದ್ಯಾನವನದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆಯ ಅಂಗವಾಗಿ ‘ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಅದರ ಪ್ರಯುಕ್ತ ಯುವ ಜಾಗೃತಿ ಚೇತನ- ವ್ಯಕ್ತಿತ್ವ ವಿಕಸನ ಕಾರ್ಯಾಗಾರ’ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈಗಿನ ಯುವಜನಾಂಗ ಸಾಗುತ್ತಿರುವ ದಾರಿಯನ್ನು ನೋಡಿದರೆ ಓರ್ವ ಪೊಲೀಸ್ ಅಧಿಕಾರಿಯಾಗಿ ನನಗೆ ನಿರಾಶೆಯಾಗುತ್ತಿದೆ. ನಮ್ಮ ಜೈಲಿಗೆ ಹೋಗಿ ನೋಡಿದರೆ ಶೇ 75 ಮಂದಿಯೂ 18ರಿಂದ 30ರೊಳಗಿನ ಪ್ರಾಯದ ಯುವಜನರೇ ಆಗಿದ್ದಾರೆ. ಭಾರತದ ಭವಿಷ್ಯ ರೂಪಿಸಬೇಕಾದವರು ಅಡ್ಡ ದಾರಿ ಹಿಡಿದು ಜೈಲಿನಲ್ಲಿ ಕೊಳೆಯುವಂತಾಗಿರುವುದು ಖೇದಕರ. ಎಲ್ಲೋ ಇವರು ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿರುವುದು ಇದಕ್ಕೆ ಕಾರಣವಾಗಿರಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಜಿಲ್ಲಾ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಕೇವಲ 39 ವರ್ಷಕ್ಕೇ ಇಡೀ ವಿಶ್ವಕ್ಕೆ ಮಾದರಿಯಾಗಿ ಔನ್ಯತ್ಯದಲ್ಲಿ ನಿಲ್ಲುವ ವಿಭಿನ್ನ ಸನ್ಯಾಸಿ ವಿವೇಕಾನಂದರು. ಅವರ ನೆನಪಿನಲ್ಲಿ ಹಮ್ಮಿಕೊಳ್ಳುವ ರಾಷ್ಟ್ರೀಯ ಯುವದಿನಾಚರಣೆಯಲ್ಲಿ ಈ ಬಾರಿ ಕೋವಿಡ್‌ನಿಂದಾಗಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಗೊಂದಲ, ಮಾನಸಿಕ ತುಮುಲಗಳಿಗೆ ಉತ್ತರವಾಗಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವ್ಯಕ್ಕಿತ್ವ ವಿಕಸನ ಶಿಬಿರ ಆಯೋಜಿಸಿದ್ದೇವೆ. ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ಮಾತನಾಡಿ, ಯಾವತ್ತಿಗೂ ನಮ್ಮ ಭಾರತೀಯ ಮೌಲ್ಯಗಳು ಅಳಿಯುವುದಿಲ್ಲ, ವಿವೇಕಾನಂದರ ಜಯಂತಿಯಂದು ನಾವೆಲ್ಲರೂ ಭಾರತೀಯರಾಗಿ ಉತ್ತಮ ಮೌಲ್ಯಗಳನ್ನು ರೂಪಿಸಿಕೊಂಡು ಮುನ್ನಡೆಯೋಣ ಎಂದರು.
ರೆಡ್‌ಕ್ರಾಸ್ ರಾಜ್ಯ ಪ್ರತಿನಿಧಿ ಯತೀಶ್ ಬೈಕಂಪಾಡಿ, ರೆಡ್‌ಕ್ರಾಸ್ ಜಿಲ್ಲಾ ಘಟಕದ ಆಡಳಿತ ಮಂಡಳಿ ಸದಸ್ಯ, ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಶುಭಕೋರಿದರು.
ರೆಡ್ ಕ್ರಾಸ್ ಜಿಲ್ಲಾಶಾಖೆಯ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ಕಾರ್ಯದರ್ಶಿ ಬಿ.ಕೆ.ಕುಸುಮಾಧರ್ ಉಪಸ್ಥಿತರಿದ್ದರು. ಯುವರೆಡ್‌ಕ್ರಾಸ್ ಉಪಸಮಿತಿ ನಿರ್ದೇಶಕ ಸಚೇತ್ ಸುವರ್ಣ ಸ್ವಾಗತಿಸಿದರು. ಯುವ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ಗಣಪತಿ ಗೌಡ ವಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮೂಡುಬಿದಿರೆ ಧವಳಾ ಕಾಲೇಜು ಉಪಪ್ರಾಂಶುಪಾಲ ಪ್ರೊ.ಅಜಿತ್ ಪ್ರಸಾದ್, ಕಲಾಶಿಕ್ಷಕ ವಿ.ಕೆ.ವಿಟ್ಲ, ಮರಳುಶಿಲ್ಪಿ ಹರೀಶ್ ಆಚಾರ್ಯ ಉಪಸ್ಥಿತರಿದ್ದರು. ಉಪನ್ಯಾಸಕಿ ನಿತ್ಯಶ್ರೀ ಕಾರ್ಯ ಕ್ರಮ ನಿರೂಪಿಸರು. ಬಳಿಕ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق