ಚಿಕ್ಕಮಗಳೂರು: ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳಾದ ವಸತಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಸವಲತ್ತುಗಳನ್ನು ಪಂಚಾಯಿತಿ ಒದಗಿಸಲು ಸದಾ ಸಿದ್ದವಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಜೆ.ಯಶವಂತ ರಾಜ್ ಹೇಳಿದರು.
ತಾಲ್ಲೂಕಿನ ಹರಿಹರದಹಳ್ಳಿಯಲ್ಲಿ ಬುಧವಾರ ಗ್ರಾಮ ಪಂಚಾಯಿತಿಯ ಪ್ರಸ್ತುತ ಸಾಲಿನ ಮೊದಲನೇ ಸುತ್ತಿನ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇದುವರೆಗೆ ಗ್ರಾಮದಲ್ಲಿ ಮಕ್ಕಳಿಗಾಗಿ ಸಾರ್ವಜನಿಕ ಆಟದ ಮೈದಾನ, ಕೆರೆಗಳ ಹೂಳು ತೆಗೆಯುವುದು, ಜಮೀನಿಗೆ ನೀರಾವರಿ ಸೌಲಭ್ಯ, ಎಸ್ಸಿ, ಎಸ್ಟಿ ಕಾಲೋನಿಗೆ ಹೈಮಾಸ್ಕ್ ದೀಪಗಳನ್ನು ಅಳವಡಿಸುವ ಮೂಲಕ ಪಂಚಾಯಿತಿಯು ಅನೇಕ ಯೋಜನೆಗಳನ್ನು ಕೈಗೊಂಡಿದೆ ಎಂದರು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಚರಂಡಿ ನಿರ್ಮಾಣ, ರಸ್ತೆ ದುರಸ್ಥಿ ಕಾಮಗಾರಿಗಳು ನಡೆದಿವೆ. ಜೊತೆಗೆ ಎಸ್ಸಿ ಎಸ್ಟಿ ಕಾಲೋನಿ ನಿವಾಸಿಗಳು ಮರಣ ಹೊಂದಿದ ಪಕ್ಷದಲ್ಲಿ ಪಂಚಾಯಿತಿ ಕಡೆಯಿಂದ ಆ ಕುಟುಂಬಕ್ಕೆ 5 ಸಾವಿರ ರೂ.ಗಳನ್ನು ಇದುವರೆಗೂ ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಗ್ರಾಮಾಂತರ ಠಾಣಾಧಿಕಾರಿ ಸ್ವರ್ಣ ಮಾತನಾಡಿ ಇಂದಿಗೂ ದೇಶದಲ್ಲಿ ಬಾಲ್ಯವಿವಾಹಗಳು ನಡೆಯುವ ಪ್ರಕರಣಗಳು ಕೆಲವೆಡೆ ವರದಿಯಾಗುತ್ತಿರುತ್ತದೆ. ಬಾಲಕಿಯರ ಆರೋಗ್ಯ ಸ್ಥಿತಿಗತಿ ಅರಿತು ಬಾಲ್ಯವಿವಾಹ ತಡೆಯಲು ಪ್ರತಿಯೊಬ್ಬರು ಮುಂದಾಗಬೇಕಿದೆ ಎಂದರು.
ಬಾಲ್ಯವಿವಾಹ, ಬಾಲಕಾರ್ಮಿಕತೆ, ಭಿಕ್ಷಾಟನೆ, ಶಾಲೆಯಿಂದ ಹೊರಗುಳಿದ ಮಕ್ಕಳು, ಮಕ್ಕಳ ಮೇಲಿನ ದೌರ್ಜನ್ಯ ಮುಕ್ತ ಗ್ರಾಮ ಪಂಚಾಯತ್‍ಗಳನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮಸಭೆಯಲ್ಲಿ ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳು, ಅಂಗಡಿವಾಡಿ ಕಾರ್ಯಕರ್ತೆ ಯರು, ಸ್ಥಳೀಯ ಶಾಲಾ ಮುಖ್ಯ ಶಿಕ್ಷಕರುಗಳು ತಮ್ಮಲ್ಲಿರುವ ಮಾಹಿತಿಯನ್ನು ಹಂಚಿಕೊಂಡರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರು ಕೆಲವು ಸೌಲಭ್ಯಕ್ಕಾಗಿ ಇದೇ ವೇಳೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಕವಿತಾ, ಸದಸ್ಯರುಗಳಾದ ಮಂಜೇಗೌಡ, ಮುಳ್ಳೇಗೌಡ, ಶ್ರೀಮತಿ ಸ್ವಪ್ನ, ಶಾರದಮ್ಮ, ಜೆ.ಎನ್.ಮಂಜೇಗೌಡ, ಶ್ರೀಮತಿ ಜಯಂತಿ, ಲಲಿತ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪಿ.ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق