ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಕ್ಕಮಗಳೂರು: ಮಾನವ ಹಕ್ಕುಗಳ ನೋಂದಣಿ ಸಮಿತಿ ಕಾರ್ಯಕಾರಿ ಸಭೆ

ಚಿಕ್ಕಮಗಳೂರು: ಮಾನವ ಹಕ್ಕುಗಳ ನೋಂದಣಿ ಸಮಿತಿ ಕಾರ್ಯಕಾರಿ ಸಭೆ


ಚಿಕ್ಕಮಗಳೂರು: ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ನೊಂದಣಿ ಸಮಿತಿ ನಿಮ್ಮ ಹಕ್ಕಿಗಾಗಿ ನಮ್ಮ ಹೋರಾಟ ಎಂಬ ಧ್ಯೇಯೋದ್ಧೇಶದೊಂದಿಗೆ ಕೆಲಸ ಮಾಡುತ್ತಿದೆ ಎಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರಘು ಹೇಳಿದರು.


ನಗರದ ಕಲ್ಲುದೊಡ್ಡಿಯ ಶಾಂತಿನಗರದ ಶ್ರೀ ಚೌಡಮ್ಮ ದೇವಾಲಯದ ಸಮುದಾಯ ಭವನದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.


ಜೀತಪದ್ಧತಿ, ಬಾಲ್ಯವಿವಾಹ, ಮಹಿಳೆಯರು ಅಥವಾ ಮಕ್ಕಳು ಶೋಷಣೆಗೆ ಒಳಗಾದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯಿಂದ ತಡೆಯುವ ಕೆಲಸ ಮಾಡಿಕೊಂಡು ಬರುತ್ತಿದೆ. ಸಂವಿಧಾನದಡಿಯಲ್ಲಿ ಮೂಲಭೂತ ಹಕ್ಕು ಹಾಗೂ ಕರ್ತವ್ಯದಲ್ಲಿ ಯಾವುದೇ ವ್ಯಕ್ತಿಗೆ ಅನ್ಯಾಯವಾದಲ್ಲಿ ಸ್ಥಳೀಯ ಸಮಿತಿಯೊಂದಿಗೆ ಜೊತೆಗೂಡಿ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುವ ಮೂಲಕ ಆ ವ್ಯಕ್ತಿಗೂ ನ್ಯಾಯ ದೊರಕಿಸುವ ಕೊಡುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು. ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946


ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಜನರಿಗೆ ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿವಿದೆಡೆಯಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದು ಆ ನಿಟ್ಟಿನಲ್ಲಿ ಅದನ್ನು ತಡೆಯುವ ಉದ್ದೇಶದಿಂದಾಗಿ ಸಮಿತಿ ರಚನೆ ಮಾಡಲಾಗಿದೆ ಎಂದರು.


ಸಾಮಾಜಿಕ ಕಾಳಜಿ ಹೊಂದಿರುವವರಿಗೆ ಸಮಸ್ಯೆಗಳು ಎದುರಾದಾಗ ಅದನ್ನು ಪರಿಹರಿಸಲು ಸದಾ ಸಿದ್ದವಿದೆ. ಜೊತೆಗೆ ದಿನನಿತ್ಯದ ಜೀವನದಲ್ಲಿ ನಡೆಯುವ ದೌರ್ಜನ್ಯ ಹಾಗೂ ಕಿರಿಕಿರಿ ತಪ್ಪಿಸಲು ಸಮಿತಿ ಸಹಕಾರಿಯಾಗಲಿದೆ ಎಂದರು.


ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಸಂತೋಷ್ ಮಾತನಾಡಿ ಮಾನವಹಕ್ಕು ಸಮಿತಿಯು ಸುಮಾರು ಎರಡು ವರ್ಷಗಳ ಹಿಂದೆ ಒಂಭತ್ತು ಮಂದಿ ಸಹಕಾರದೊಂದಿಗೆ ಸ್ಥಾಪನೆಯಾಗಿದ್ದು ಇಂದು ದೊಡ್ಡಮಟ್ಟದಲ್ಲಿ ಹೆಸರು ಪಡೆದುಕೊಂಡು ಮುಂದುವರೆಯುತ್ತಿದೆ ಎಂದರು.


ರಾಜ್ಯಾದ್ಯಂತ ಇಪತ್ತು ಜಿಲ್ಲೆಗಳಲ್ಲಿ ಸಮಿತಿಯು ರಚನೆಗೊಂಡು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಯಾವುದೇ ಹೋರಾಟ ಸಮಾಜಮುಖಿಯಾಗಿದ್ದಲ್ಲಿ  ಕಾನೂನಾತ್ಮಕ ಹೋರಾಟಕ್ಕೆ ಸಮಿತಿ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷ ಎಂ.ರಾಜೇಶ್ ಜಿಲ್ಲೆಯಲ್ಲಿ ನೇಮಕಗೊಳಿಸಿದ ದಿನದಿಂದಲೂ ಸಾಮಾಜಿಕ ಕೆಲಸಗಳಾದ ರಾಷ್ಟ್ರೀಯ ಮಾನವ ಹಕ್ಕು ದಿನದ ಪ್ರಯುಕ್ತ ಶಾಲೆಗಳಿಗೆ ತೆರಳಿ ಅರಿವು ಮೂಡಿಸಿರುವುದು, ಹಿಂದುಳಿದ ವರ್ಗದ ಜನರಿಗೆ ಇ-ಶ್ರಮ್, ಕಾರ್ಮಿಕರ ಕಾರ್ಡ್ ದೊರಕಿಸಿಕೊಡುವ ಕಾರ್ಯಕ್ರಮ ಸೇರಿದಂತೆ ಅನೇಕ ಜನೋಪಯೋಗಿ ಕೆಲಸ ನಿರ್ವಹಿಸಿಕೊಂಡು ಬರಲಾಗುತ್ತಿದೆ ಎಂದರು.


ಮುಂದಿನ ದಿನಗಳಲ್ಲಿ ಸಮಿತಿಯ ವತಿಯಿಂದ ಅನ್ಯಾಯಗೊಳದಾದ ವ್ಯಕ್ತಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಮುಂದಾಗಲಿದ್ದು ಈ ಹೋರಾಟಕ್ಕೆ ಎಲ್ಲಾ ಮುಖಂಡರ ಹಾಗೂ ಜಿಲ್ಲಾ ಸಮಿತಿಯು ಸಹಕಾರ ನೀಡಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಹರೀಶ್ ಬಾಬು, ರಾಜ್ಯಾಧ್ಯಕ್ಷ ದೀಪಕ್, ರಾಜ್ಯ ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಗಗನ್ ದೀಪ್, ಜಂಟಿ ಕಾರ್ಯದರ್ಶಿ ಕೃಷ್ಣ, ಸಂಘಟನಾ ಕಾರ್ಯದರ್ಶಿ ಸುನೀಲ್, ಜಿಲ್ಲಾ ಉಪಾಧ್ಯಕ್ಷ ಅರುಣ್‍ಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿನುತಾ ಮಂಜುನಾಥ್, ನಗರಾಧ್ಯಕ್ಷೆ ಮಂಜುಳಾ ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post