ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಗು ಎದೆ ಹಾಲು ಕುಡಿಯುತ್ತಿಲ್ಲವೆಂದು ತಾಯಿ ಆತ್ಮಹತ್ಯೆಗೆ ಶರಣು

ಮಗು ಎದೆ ಹಾಲು ಕುಡಿಯುತ್ತಿಲ್ಲವೆಂದು ತಾಯಿ ಆತ್ಮಹತ್ಯೆಗೆ ಶರಣು

 


ಮೈಸೂರು: ತನ್ನ ಮಗು ಎದೆ ಹಾಲು ಕುಡಿಯುತ್ತಿಲ್ಲ ಎಂದು ಬೇಸರಗೊಂಡಿದ್ದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಮೈಸೂರಿನ ಗುಂಡೂರಾವ್ ನಗರದಲ್ಲಿ ನಡೆದಿದೆ. ವೈದ್ಯೆ ಅರ್ಪಿತಾ ಆತ್ಮಹತ್ಯೆ ಮಾಡಿಕೊಂಡ ತಾಯಿ.

ಇವರು ಗುಂಡೂರಾವ್ ನಗರದಲ್ಲಿ ವಾಸವಿದ್ದು, ‌ಕಳೆದ 5 ವರ್ಷಗಳ ಹಿಂದೆ ವೈದ್ಯ ವೃತ್ತಿ ಮಾಡುತ್ತಿದ್ದವರನ್ನೇ ಮದುವೆಯಾಗಿದ್ದರು. 

4 ವರ್ಷಗಳ ನಂತರ ಮಗುವಾಗಿದ್ದು, ಆ ಮಗುವಿಗೆ ಈಗ 9 ತಿಂಗಳು. ಮಗು ಕಳೆದ 15 ದಿನಗಳಿಂದ ಎದೆ ಹಾಲು ಕುಡಿಯುತ್ತಿರಲಿಲ್ಲ ಎಂದು ತಾಯಿ ಅರ್ಪಿತಾ ಬೇಸರಗೊಂಡಿದ್ದರು. 

ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದು, ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ..


0 تعليقات

إرسال تعليق

Post a Comment (0)

أحدث أقدم