ಮೈಸೂರು : ಹೆತ್ತ ತಾಯಿ 4 ವರ್ಷದ ಪುಟ್ಟ ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.
4 ವರ್ಷದ ಶ್ರೀನಿವಾಸ್ ತಾಯಿಯಿಂದಲೇ ಹತ್ಯೆಯಾದ ಬಾಲಕ.
ಭವಾನಿ ಎಂಬ ಮಹಿಳೆ ತನ್ನ ಮಗನನ್ನೇ ಕೊಚ್ಚಿ ಕೊಲೆಗೈದಿದ್ದಾಳೆ. ಭವಾನಿ ಮಾನಸಿಕ ಅಸ್ವಸ್ಥಳಾಗಿದ್ದು, ಮನೆಯಲ್ಲಿ ಪತಿ ಶಂಕರ್ ಇಲ್ಲದ ವೇಳೆ ಪುಟ್ಟ ಮಗನನ್ನು ಮಚ್ಚಿನಿಂದ ಕೊಚ್ಚಿದ್ದಾಳೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಹೆಚ್.ಡಿ. ಕೋಟೆ ಠಾಣೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ.
إرسال تعليق