ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಟ್ಯಾಂಕರ್ ನಿಂದ ರಾಸಾಯನಿಕ ಸೋರಿಕೆ; 5 ಮಂದಿ ಸಾವು, 20 ಮಂದಿ ಗಾಯ

ಟ್ಯಾಂಕರ್ ನಿಂದ ರಾಸಾಯನಿಕ ಸೋರಿಕೆ; 5 ಮಂದಿ ಸಾವು, 20 ಮಂದಿ ಗಾಯ

 


ನವದೆಹಲಿ:  ಗುಜರಾತ್‌ ನ ಸೂರತ್‌ ಸಚಿನ್ ಜಿಐಡಿಸಿ ಪ್ರದೇಶದಲ್ಲಿ ಟ್ಯಾಂಕರ್‌ ನಿಂದ ರಾಸಾಯನಿಕ ಸೋರಿಕೆಯಾದ ಘಟನೆಯೊಂದು ಗುರುವಾರ ನಸುಕಿನ ವೇಳೆ ನಡೆದಿದೆ.

ಈ ಪರಿಣಾಮ 5 ಜನ ಸಾವನ್ನಪ್ಪಿದ್ದು, 20 ಜನ ಗಾಯಗೊಂಡಿದ್ದಾರೆ. ಅಸ್ವಸ್ಥರನ್ನು ತಕ್ಷಣವೇ ಚಿಕಿತ್ಸೆಗಾಗಿ ಸೂರತ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು.

ಸೋರಿಕೆಯಾದ ಟ್ಯಾಂಕರ್‌ ಗೆ ಜೆರ್ರಿ ಕೆಮಿಕಲ್ ತುಂಬಿತ್ತು. ಸಚಿನ್ ಜಿಐಡಿಸಿ ಒಂದು ಕೈಗಾರಿಕಾ ಪ್ರದೇಶವಾಗಿದೆ. ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಟ್ಯಾಂಕರ್ ಚಾಲಕ ತ್ಯಾಜ್ಯವನ್ನು ಚರಂಡಿಗೆ ಸುರಿಯಲು ಮುಂದಾದಾಗ ಗಾಳಿಗೆ ರಾಸಾಯನಿಕ ಸ್ಪರ್ಶಿಸಿ ಅನಾಹುತ ಸಂಭವಿಸಿದೆ.

ವಡೋದರಾದಿಂದ ಟ್ಯಾಂಕರ್ ಬಂದಿದ್ದು, ಚಾಲಕ ಸಚಿನ್ ಜಿಐಡಿಸಿ ಪ್ರದೇಶದ ಚರಂಡಿಗೆ ಅಕ್ರಮವಾಗಿ ರಾಸಾಯನಿಕ ತ್ಯಾಜ್ಯವನ್ನು ಸುರಿಯಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ.

ಮೃತ ಕಾರ್ಮಿಕರು ಸಚಿನ್ ಜಿಐಡಿಸಿ ಪ್ರದೇಶದ ಸೀರೆ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹತ್ತಿರದ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದಾಗ ರಾಸಾಯನಿಕ ಸೋರಿಕೆಯಾಗಿ ಅವರು ಸಾವನ್ನಪ್ಪಿದ್ದಾರೆ.

ಗ್ಯಾಸ್ ಸೋರಿಕೆಯಾಗುತ್ತಿದ್ದಂತೆ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಟ್ಯಾಂಕರ್ ಚಾಲಕ ಮತ್ತು ಮಾಲೀಕರನ್ನು ಬಂಧಿಸಲು ತನಿಖೆ ಆರಂಭಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم