ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಟ್ರಕ್ ಮತ್ತು ಬಸ್ ಅಪಘಾತ ; 17 ಮಂದಿ ಸಾವು, 26 ಮಂದಿಗೆ ಗಾಯ, ಪ್ರಧಾನಿಯಿಂದ ಪರಿಹಾರ ಘೋಷಣೆ

ಟ್ರಕ್ ಮತ್ತು ಬಸ್ ಅಪಘಾತ ; 17 ಮಂದಿ ಸಾವು, 26 ಮಂದಿಗೆ ಗಾಯ, ಪ್ರಧಾನಿಯಿಂದ ಪರಿಹಾರ ಘೋಷಣೆ



ರಾಂಚಿ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿ 17 ಮಂದಿ ಸಾವಿಗೀಡಾಗಿದ್ದು, 26 ಮಂದಿ ಗಾಯಗೊಂಡಿರುವ ಘಟನೆಯೊಂದು ಜಾರ್ಖಂಡ್‌ನ ಪಾಕುರ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಈ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50,000 ಪರಿಹಾರ ಧನ ನೀಡುವುದಾಗಿ ಘೋಷಿಸಿದ್ದಾರೆ.

ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಸಾಹಿಬ್ಜಂಗ್ ನ ಬರ್ಹರ್ವಾದಿಂದ ದೇವಘರ್‌ನ ಜಸಿದ್ಹ್ ಗೆ ತೆರಳುತ್ತಿತ್ತು.

ಅಪಘಾತದ ಬಳಿಕ ಕೆಲವು ಪ್ರಯಾಣಿಕರು ಬಸ್ ನೊಳಗೆ ಸಿಲುಕಿಕೊಂಡಿದ್ದರು. ಅವರನ್ನು ಬಳಿಕ ರಕ್ಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم