ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೇವಾಲಯದ ಪ್ರಸಾದ ಸೇವಿಸಿ 53ಮಂದಿ ಭಕ್ತರು ಅಸ್ವಸ್ಥ

ದೇವಾಲಯದ ಪ್ರಸಾದ ಸೇವಿಸಿ 53ಮಂದಿ ಭಕ್ತರು ಅಸ್ವಸ್ಥ

 


ಕೋಲಾರ : ಹೊಸ ವರ್ಷದ ದಿನದಂದು ದೇವಸ್ಥಾನವೊಂದರಲ್ಲಿ ಪ್ರಸಾದ ಸೇವಿಸಿ 19 ಮಕ್ಕಳು ಸೇರಿದಂತೆ 53 ಭಕ್ತರು ಅಸ್ವಸ್ಥಗೊಂಡಿರುವ ಘಟನೆಯೊಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.


ಯಲ್ಲೂರು ಹೋಬಳಿಯ ಬೀರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ಭಕ್ತಾಧಿಗಳಿಗೆ ಚಿತ್ರಾನ್ನ ಮತ್ತು ಕೇಸರಿಬಾತ್ ಪ್ರಸಾದ ವಿತರಿಸಲಾಗಿತ್ತು.

ಈ ಪ್ರಸಾದವನ್ನು ಸೇವಿಸಿದ ಬಳಿಕ ವಾಂತಿಯಾಗಿ ಹಲವು ಮಂದಿ ಅಸ್ವಸ್ಥಗೊಂಡಿದ್ದಾರೆ.

ತಕ್ಷಣ ಗ್ರಾಮಸ್ಥರು ಆ್ಯಂಬುಲೆನ್ಸ್ ಮತ್ತು ಇತರೆ ವಾಹನಗಳ ಮೂಲಕ ಅಸ್ವಸ್ಥರನ್ನು ರಾತ್ರಿ 10 ಗಂಟೆಗೆ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

0 Comments

Post a Comment

Post a Comment (0)

Previous Post Next Post