ಪುತ್ತೂರು : ತಾಲೂಕಿನ ಕಾರ್ಪಾಡಿ ದೇವಸ್ಥಾನದಲ್ಲಿ ನೂತನವಾಗಿ ಆರಂಭಗೊಂಡಿರುವ ಶ್ರೀ ಉಳ್ಳಾಲ್ತಿ ಮಹಿಳಾ ಮಂಡಲ ಉದ್ಘಾಟನಾ ಕಾರ್ಯಕ್ರಮ ಜನವರಿ 1 ರಂದು ಕಾರ್ಪಾಡಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಮಹಿಳಾ ಮಂಡಲದ ಉದ್ಘಾಟನೆಯನ್ನು ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ. ಸುಧಾಕರ್ ರಾವ್ ಅವರು ಉದ್ಘಾಟಿಸಿದರು.
ಮಹಿಳಾ ಮಂಡಲ ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಕಾರ್ಯಗಳನ್ನು ಮಾಡಬೇಕೆಂಬುದನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ತಾಲೂಕು ಯುವ ಜನ ಒಕ್ಕೂಟ(ರಿ) ಇದರ ಅಧ್ಯಕ್ಷರಾದ ದಿನೇಶ್ ಸಾಲ್ಯಾನ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಪ್ರಜ್ಞಾ ಕುಲಾಲ್ ಕಾವು ಇವರು ಮಹಿಳಾ ಮಂಡಲದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮ ದಲ್ಲಿ ನೂತನವಾಗಿ ಆರಂಭವಾಗಿರುವ ಶ್ರೀ ಉಳ್ಳಾಲ್ತಿ ಮಹಿಳಾ ಮಂಡಲ ದ ಪಧಾದಿಕಾರಿಗಳನ್ನು ನೇಮಿಸಲಾಯಿತು.
ಅಧ್ಯಕ್ಷರಾಗಿ- ಶ್ರೀಮತಿ ಅಂಬಿಕಾ, ಕಾರ್ಯದರ್ಶಿ-ಶ್ರೀಮತಿ ಸುಮಾ ,
ಕೋಶಾಧಿಕಾರಿ- ಶ್ರೀಮತಿ ಉಷಾ
ಇವರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ತಾಲೂಕು ಯುವ ಜನ ಒಕ್ಕೂಟದ ಜತೆ ಕಾರ್ಯದರ್ಶಿ ಸಂದೀಪ್, ಧರ್ಮಸ್ಥಳ ಅಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಅಂಬಿಕಾ ರಮೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಸದಸ್ಯರು ಹಾಗೂ ಊರವರು ಭಾಗವಹಿಸಿದರು. ಶ್ರೀಮತಿ ಭಾರತಿ ಇವರು ಕಾರ್ಯಕ್ರಮ ನಿರೂಪಿಸಿದರು. ವಾಸುಕಿ ಭಜನಾ ತಂಡದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಂಬಿಕಾ ರವರು ಸ್ವಾಗತಿಸಿ, ಶ್ರೀಮತಿ ಜಯಂತಿ ಯವರು ವಂದಿಸಿದರು.
Post a Comment