ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಯ್ಯಪ್ಪನ ದರ್ಶನಕ್ಕೂ ಆನ್ಲೈನ್ ಬುಕ್ಕಿಂಗ್...

ಅಯ್ಯಪ್ಪನ ದರ್ಶನಕ್ಕೂ ಆನ್ಲೈನ್ ಬುಕ್ಕಿಂಗ್...


ಜನವರಿಯಲ್ಲಿ ವಿಶೇಷವಾಗಿ ನಾವು ಮಕರ ಸಂಕ್ರಮಣವನ್ನು ಅದ್ಧೂರಿಯಾಗಿ ಆಚರಿಸುತ್ತೇವೆ. ಈ ಸಂದರ್ಭದಲ್ಲಿ ಅನೇಕ ಶಬರಿಮಲೆ ಭಕ್ತಾದಿಗಳು ಮಾಲೆ ಹಾಕಿ ಅಲ್ಲಿಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುವುದು ವಾಡಿಕೆ. 

ಆದರೆ ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಶಬರಿಮಲೆಗೆ ತೆರಳುವ ಭಕ್ತರು ಅನೇಕ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಅನಿವಾರ್ಯತೆ ಇದೆ.

ಆದ್ದರಿಂದ ಕೇಂದ್ರ ಸರ್ಕಾರ ನಿತ್ಯ 25 ಸಾವಿರದಿಂದ 30ಸಾವಿರ ಭಕ್ತರಿಗೆ ಅವಕಾಶ ಕಲ್ಪಿಸಿದೆ. ಆನ್ಲೈನ್ ಬುಕ್ಕಿಂಗ್ ಮಾಡಿಸಿಕೊಳ್ಳದವರಿಗೆ ನೀಲಕ್ಕಲ್ ನಲ್ಲಿಯೇ ಸ್ಥಳದಲ್ಲೇ ಬುಕ್ಕಿಂಗ್ ಮಾಡಿ ತೆರಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಕೋವಿಡ್ ನೆಗೆಟಿವ್ ವರದಿ, ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಅಲ್ಲಿ ಕೊರೋನಾ ಪರೀಕ್ಷೆ ಕೂಡ ಇರಲಾಗುವುದು.  

ಮುಂಗಡವಾಗಿ ಬುಕ್ಕಿಂಗ್ ಮಾಡಿದ ಭಕ್ತರು ಅದೇ ನಿಗದಿತ ಸಮಯಕ್ಕೆ ದರ್ಶನಕ್ಕೆ ಹಾಜರಾಗುವುದು ಕಡ್ಡಾಯ. ಒಂದು ವೇಳೆ ಆ ಸಮಯಕ್ಕೆ ದರ್ಶನಕ್ಕೆ ನಿರಾಕರಿಸಿದಲ್ಲಿ ಮತ್ತೆ ಅವಕಾಶ ನೀಡಲಾಗುವುದಿಲ್ಲ.

ಆದ್ದರಿಂದ ಇನ್ನು ಮಾಲೆ ಹಾಕುವ ಅಯ್ಯಪ್ಪ ದೇವರ ಭಕ್ತಾದಿಗಳು ಇದರ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಯಾರಿಗೂ ತೊಂದರೆ ಆಗದಿರುವುದು ಮತ್ತು ಕೋವಿಡ್ ಹರಡಬಾರದೆಂಬುವುದು ಮಾತ್ರ ಇದರ ಮುಖ್ಯ ಉದ್ದೇಶವಾಗಿದೆ.

0 Comments

Post a Comment

Post a Comment (0)

Previous Post Next Post