ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾರತೀಯ ಹಿಮೋಫಿಲಿಯಾ ಫೆಡರೇಶನ್ ಸದಸ್ಯರಾಗಿ ಮೈಸೂರಿನ ಡಾ ಎಸ್. ಕೆ. ಮಿತ್ತಲ್ ಆಯ್ಕೆ

ಭಾರತೀಯ ಹಿಮೋಫಿಲಿಯಾ ಫೆಡರೇಶನ್ ಸದಸ್ಯರಾಗಿ ಮೈಸೂರಿನ ಡಾ ಎಸ್. ಕೆ. ಮಿತ್ತಲ್ ಆಯ್ಕೆ


ಮೈಸೂರು: ಭಾರತದಲ್ಲಿ ಹಿಮೋಫಿಲಿಯಾ ಎಂಬ ರಕ್ತ ಸಂಬಂಧಿತ ಕಾಯಿಲೆಯ ಸುಮಾರು ಒಂದು ಲಕ್ಷ ರೋಗಿಗಳಿದ್ದಾರೆ. ಇವರು ಯೋಗಕ್ಷೇಮ ಮತ್ತು ಔಷಧೋಪಚಾರ ನಿಟ್ಟಿನಲ್ಲಿ ಸಹಾಯ ಮಾಡಲು ಭಾರತೀಯ ಹಿಮೋಫಿಲಿಯಾ ಫೆಡರೇಶನ್ ಎಂಬ ಸಂಸ್ಥೆ 1983 ರಲ್ಲಿ ಸ್ಥಾಪನೆಯಾಯಿತು. ಇದು ಕೆನಡಾ ಮೂಲದ ವರ್ಲ್ಡ್ ಹಿಮೋಫಿಲಿಯಾ ಫೆಡರೇಷನ್ ಸಹಯೋಗ ಪಡೆಯಿತು.


ಕೆನಡಾದ ಜಾಗತಿಕ ಸಂಸ್ಥೆಯ ಸಹಯೋಗದೊಂದಿಗೆ ಭಾರತದಾದ್ಯಂತ ಸುಮಾರು 90 ಶಾಖೆಗಳನ್ನು ಹೊಂದಿದೆ. ಇವುಗಳೆಲ್ಲವೂ ಸ್ಥಳೀಯ ಹಿಮೋಫಿಲಿಯಾ ರೋಗಿಗಳ ಅಗತ್ಯ ಔಷಧಿ ಮತ್ತು ಸರ್ಕಾರದ ವೈದ್ಯಕೀಯ ವ್ಯವಸ್ಥೆ ಪೂರೈಕೆ ಹಾಗೂ ಇತರೆ ಯೋಗಕ್ಷೇಮ ಚಟುವಟಿಕೆಗಳನ್ನು ನಿರ್ವಹಿಸುತ್ತಿವೆ.


ಮೈಸೂರು ಹಿಮೋಫಿಲಿಯಾ ಸೊಸೈಟಿ (ನೊ) ಇದರ ಜನಪ್ರಿಯ ಅಧ್ಯಕ್ಷರಾಗಿ ಕಳೆದ ಒಂದು ದಶಕದಿಂದ ಸಾಮಾಜಿಕ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಸಮಾಜಸೇವಕ, ಪ್ರಸಿದ್ಧ ಗೋಸೇವಕ ಹಾಗೂ ಖ್ಯಾತ ಉದ್ಯಮಿ ಡಾ ಎಸ್. ಕೆ. ಮಿತ್ತಲ್ ಇವರನ್ನು ಭಾರತೀಯ ಹಿಮೋಫಿಲಿಯಾ ಫೆಡರೇಶನ್ ಸಂಸ್ಥೆಯ ಕರ್ನಾಟಕದ ಸದಸ್ಯರಾಗಿ ನೇಮಿಸಲಾಗಿದೆ.

 

ಭಾರತೀಯ ಹಿಮೋಫಿಲಿಯಾ ಫೆಡರೇಶನ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಭಾರತೀಯ ಹಿಮೋಫಿಲಿಯಾ ಫೆಡರೇಶನ್ ನಲ್ಲಿ ಇತ್ತೀಚೆಗೆ ಕರ್ನಾಟಕದಿಂದ ನಾಮನಿರ್ದೇಶನಗೊಂಡ ಸದಸ್ಯ ಡಾ ಎಸ್. ಕೆ. ಮಿತ್ತಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಮೈಸೂರಿನಲ್ಲಿ ಜರುಗಿದ ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರೇಮ್ ಆಳ್ವ, ದೀಪಕ್ ಸಿಂಘಾಲ್, ಡಾ. ಆಪ್ಟೆ,  ಅಶೋಕ್, ಒ ಪ್ರತಾಪ್ ಕುಮಾರ್, ಎನ್. ಮಹದೇವ, ಕೆ.ಬಿ.ಲಿಂಗಪ್ಪ, ಪರ್ವೀನ್ ಕುಮಾರ್, ಶ್ರೀಮತಿ ಸೀಮಾ ಸೇಠ್, ರಕ್ಷಿತ್, ಡಿ.ಎಸ್.ಶಿಂಧೆ, ಪ್ರಕಾಶ್, ಮುದ್ದೀನ್, ಶ್ರೀಮತಿ ರತ್ನ, ಆನಂದ್ ಮೊದಲಾದ ಗಣ್ಯರು ಭಾಗವಹಿಸಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post