ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕ್ಯಾನ್ಸರ್ ರೋಗಿಗಳಿಗೆ ಕೇಶ ನೀಡಿದ ತೊಕ್ಕೊಟ್ಟಿನ ಯುವಕ

ಕ್ಯಾನ್ಸರ್ ರೋಗಿಗಳಿಗೆ ಕೇಶ ನೀಡಿದ ತೊಕ್ಕೊಟ್ಟಿನ ಯುವಕ

ಇತ್ತೀಚಿನ ದಿನಗಳಲ್ಲಿ ಯುವಜನತೆಯು ಡ್ರಗ್ಸ್ ನಂತಹ ಮಾದಕ ದ್ರವ್ಯಗಳಿಗೆ ವ್ಯಸನಿಗಳಾಗಿ ಹೋಗುತ್ತಿದ್ದಾರೆ. ಅವರು ತಮ್ಮ ಸಮಯವನ್ನು  ಬೇಡದ ಕೆಲಸಗಳಿಗೆ ವಿನಿಯೋಗಿಸುತ್ತಿದ್ದಾರೆ. ತಾವು ಕಲಿತ ಶಿಕ್ಷಣಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. 

ಇಂತಹ ಸಂದರ್ಭದಲ್ಲೂ ನಾವು ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಯುವಜನತೆಯನ್ನು ಕೂಡ ನೋಡಬಹುದು. ಪ್ರಸ್ತುತ ದಿನದಲ್ಲಿ ಸೌಂದರ್ಯಕ್ಕೆ ಒತ್ತು ಕೊಡುವ ಪುರುಷರು ಜಾಸ್ತಿ. ಇವರ ಮಧ್ಯೆ ಕೂದಲನ್ನು ಬೆಳೆಸಿ ಕ್ಯಾನ್ಸರ್ ರೋಗಿಗೆ ದಾನ ಮಾಡುವ ಮೂಲಕ ಇಡೀ ಊರಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಂಗಳೂರು ತೊಕ್ಕುಟ್ಟು ನಿವಾಸಿ 22 ವರ್ಷದ ಯುವಕ ವಾಸುಕೀ ಶಾಖೆ ಬಜರಂಗದಳ ಇದರ ಕಾರ್ಯಕರ್ತನಾದ ಪ್ರೀತಮ್ ಇವರು ಮೂರು ವರ್ಷ ಕೂದಲನ್ನು ಬೆಳೆಸಿ ವೆಲೆನ್ಸಿಯಾ ಕ್ಯಾನ್ಸರ್ ರೋಗಿಗೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

0 Comments

Post a Comment

Post a Comment (0)

Previous Post Next Post