ಇಂತಹ ಸಂದರ್ಭದಲ್ಲೂ ನಾವು ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಯುವಜನತೆಯನ್ನು ಕೂಡ ನೋಡಬಹುದು. ಪ್ರಸ್ತುತ ದಿನದಲ್ಲಿ ಸೌಂದರ್ಯಕ್ಕೆ ಒತ್ತು ಕೊಡುವ ಪುರುಷರು ಜಾಸ್ತಿ. ಇವರ ಮಧ್ಯೆ ಕೂದಲನ್ನು ಬೆಳೆಸಿ ಕ್ಯಾನ್ಸರ್ ರೋಗಿಗೆ ದಾನ ಮಾಡುವ ಮೂಲಕ ಇಡೀ ಊರಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗಳೂರು ತೊಕ್ಕುಟ್ಟು ನಿವಾಸಿ 22 ವರ್ಷದ ಯುವಕ ವಾಸುಕೀ ಶಾಖೆ ಬಜರಂಗದಳ ಇದರ ಕಾರ್ಯಕರ್ತನಾದ ಪ್ರೀತಮ್ ಇವರು ಮೂರು ವರ್ಷ ಕೂದಲನ್ನು ಬೆಳೆಸಿ ವೆಲೆನ್ಸಿಯಾ ಕ್ಯಾನ್ಸರ್ ರೋಗಿಗೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
إرسال تعليق