ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೊಕ್ಕುಳ ಬಳ್ಳಿ ಸೇವಿಸಿ ಮಹಿಳೆ ಸಾವು

ಹೊಕ್ಕುಳ ಬಳ್ಳಿ ಸೇವಿಸಿ ಮಹಿಳೆ ಸಾವು

 


ಗುಂಟೂರು: ಗರ್ಭಿಣಿಯಾಗಲು ಸಹಾಯ ಮಾಡಬಹುದೆಂಬ ನಿರೀಕ್ಷೆಯಲ್ಲಿ ಹೊಕ್ಕುಳ ಬಳ್ಳಿ ಸೇವಿಸಿ 19 ವರ್ಷದ ಮಹಿಳೆ ಸಾವನ್ನಪ್ಪಿದ ಘಟನೆಯೊಂದು ಜಿಲ್ಲೆಯ ನಾದೆಂಡ್ಲದ ತುಬಡು ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ದಾಚೆಪಲ್ಲಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ತುಬಡು ಗ್ರಾಮದ ರವಿ ಎಂಬಾತನೊಂದಿಗೆ ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆ, ಗರ್ಭಿಣಿಯಾಗಲು ಎರಡು ವರ್ಷದಿಂದ ಪ್ರಯತ್ನಿಸುತ್ತಿದ್ದರು. ಈ ಕಾರಣದಿಂದ ನಾಟಿ ಔಷಧಗಳನ್ನೆಲ್ಲಾ ಪಡೆದಿದ್ದರು. ಗರ್ಭಿಣಿಯಾಗಲು ಹೊಕ್ಕಳ ಬಳ್ಳಿ ಸೇವಿಸಿ ಆಕೆ ಸಾವನ್ನಪ್ಪಿರುವುದಾಗಿ ಕೆಲ ಸ್ಥಳೀಯರು ಆರೋಪಿಸಿದ್ದಾರೆ.

ಗುರುವಾರ ಆಕೆ ನವಜಾತ ಶಿಶುವಿನ ಹೊಕ್ಕಳ ಬಳ್ಳಿಯನ್ನು ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದು, ಕೂಡಲೇ ನರಸರಾವ್ ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಆಕೆ ತಾಯಿ ನಾಂದೆಡ್ಲದ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನರಸರಾವ್ ಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم