ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಫೆಬ್ರವರಿ 11ಕ್ಕೆ ಲವ್ ಮಾಕ್ಟೇಲ್ 2 ಸಿನಿಮಾ ರಿಲೀಸ್

ಫೆಬ್ರವರಿ 11ಕ್ಕೆ ಲವ್ ಮಾಕ್ಟೇಲ್ 2 ಸಿನಿಮಾ ರಿಲೀಸ್

ಬೆಂಗಳೂರು: ಡಾರ್ಲಿಂಗ್ ಕೃಷ್ಣ ಅವರು ನಿರ್ದೇಶಿಸಿ ನಟಿಸಿದ ಲವ್ ಮಾಕ್ಟೇಲ್ ಸಿನಿಮಾ ಅಭಿಮಾನಿಗಳ ಮನಸ್ಸನ್ನು ಗೆದ್ದಿತ್ತು. ಇದೀಗ ಲವ್ ಮಾಕ್ಟೇಲ್ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 

ಡಾರ್ಲಿಂಗ್ ಕೃಷ್ಣ ಅವರೇ ಈ ಸಿನಿಮಾದ ನಿರ್ದೇಶನ ಹಾಗೂ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು ಇದೀಗ ಸಿನಿಮಾದ ಕೆಲಸ ಪೂರ್ಣಗೊಂಡಿದ್ದು ಫೆಬ್ರವರಿ 11 ರಂದು ರಿಲೀಸ್ ಮಾಡಲು ನಿರ್ಧರಿಸಿದ್ದಾರೆ. ಅದನ್ನು ಅವರ ಪತ್ನಿ ಮಿಲನಾ ನಾಗರಾಜ್ ತನ್ನ ಸಾಮಾಜಿಕ  ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡ ಡಾರ್ಲಿಂಗ್ ಕೃಷ್ಣ ಅವರು ಚಿತ್ರದ ಮೊದಲ ಭಾಗದಲ್ಲೇ ಜನರ ಮನಸ್ಸನ್ನು ಗೆದ್ದಿದ್ದರು. ಅವರ ನಿರ್ದೇಶನ ಜೊತೆಗೆ ನಟನೆಯನ್ನು ಎಲ್ಲರು ಮೆಚ್ಚುಕೊಂಡಿದ್ದರು. ಇದೀಗ ಫೆಬ್ರವರಿಯಲ್ಲಿ ತೆರೆ ಕಾಣಲಿರುವ ಲವ್ ಮಾಕ್ಟೇಲ್ 2  ಚಿತ್ರದ ಬಗ್ಗೆ ಎಲ್ಲರು ಕುತೂಹಲ ವ್ಯಕ್ತಪಡಿಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم