ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ ಅಷ್ಟ ಮಠಗಳ ಆಸ್ಥಾನ ವಿದ್ವಾನ್‌ ಕೊರಂಗ್ರಪಾಡಿ ಸೀತಾರಾಮ ಆಚಾರ್ಯ ನಿಧನ

ಉಡುಪಿ ಅಷ್ಟ ಮಠಗಳ ಆಸ್ಥಾನ ವಿದ್ವಾನ್‌ ಕೊರಂಗ್ರಪಾಡಿ ಸೀತಾರಾಮ ಆಚಾರ್ಯ ನಿಧನ




ಉಡುಪಿ: ಹಿರಿಯ ಜ್ಯೋತಿಷ ವಿದ್ವಾನ್, ಉಡುಪಿ ಶ್ರೀ ಕೃಷ್ಣ ಮಠ ಅಷ್ಟ ಮಠಗಳ ಆಸ್ಥಾನ‌ ವಿದ್ವಾನ್ ಕೊರಂಗ್ರಪಾಡಿ ಸೀತಾರಾಮ ಆಚಾರ್ಯರು ಇಂದು ವಿಧಿವಶರಾಗಿದ್ದಾರೆ.


ಬಜಗೋಳಿ ರಾಜಗೋಪಾಲ ಭಟ್, ಕೊರಂಗ್ರಪಾಡಿ ಸೀತಾರಾಮಾಚಾರ್ಯರ ನಿಧನಕ್ಕೆ ಶ್ರೀ ಪೇಜಾವರ ಶ್ರೀ ಸಂತಾಪ 


ಇಂದು ಸೋಮವಾರ ನಿಧನಹೊಂದಿದ ಇಬ್ಬರು ಜ್ಯೋತಿಷಿಗಳಾದ ಬಜಗೋಳಿ ರಾಜಗೋಪಾಲ ಭಟ್ ಮತ್ತು ಕೊರಂಗ್ರಪಾಡಿ ಸೀತಾರಾಮಾಚಾರ್ಯರ ನಿಧನಕ್ಕೆ ಶ್ರೀಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಬಜಗೋಳಿಯಲ್ಲಿ ಅನೇಕ ವರ್ಷಗಳಿಂದ ಬಹುದೊಡ್ಡ ಯಾಗ ಯಜ್ಞಗಳು ಮಾತ್ರವಲ್ಲದೇ ಅನೇಕ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಮತ್ತು ಜ್ಯೋತಿಷ್ಯದ ಮೂಲಕ ನೂರಾರು ಮಂದಿಗೆ ಮಾರ್ಗದರ್ಶನ ಮಾಡುತ್ತಿದ್ದ ರಾಜಗೋಪಾಲ ಭಟ್ಟರು ನಮ್ಮ ಗುರುಗಳ ವಿಶೇಷ ಭಕ್ತರೂ ಅಭಿಮಾನ ಪಾತ್ರರೂ ಆಗಿದ್ದರು. 


ಕೊರಂಗ್ರಪಾಡಿ ಸೀತಾರಾಮ ಆಚಾರ್ಯರು ಉಡುಪಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಅನೇಕ ವರ್ಷಗಳ ಕಾಲ ಅಧ್ಯಾಪನ ವೃತ್ತಿ ನಡೆಸಿದವರು. ಉತ್ತಮ‌ ಜ್ಯೋತಿಷಿಯಾಗಿಯೂ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ ವಿದ್ವಾಂಸರಾಗಿ ಶ್ರೀ ಮಠವೂ ಸೇರಿದಂತೆ ಎಲ್ಲ ಮಠಗಳೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ನಮ್ಮ ಗುರುಗಳ ವಿಶೇಷ ಅಭಿಮಾನ ಪಾತ್ರರೂ ಆಗಿದ್ದರು.


ಇಂದು ನಿಧನ ಹೊಂದಿದ ಈರ್ವರ ಆತ್ಮಗಳಿಗೂ ನಮ್ಮ ಆರಾಧ್ಯಮೂರ್ತಿಯಾದ ಶ್ರೀರಾಮ- ಕೃಷ್ಣ -ವಿಠಲ ದೇವರು ಸದ್ಗತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ ಎಂದು ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم