ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ತುಳುನಾಡಿನ ಪ್ರಾಣಿ ಜಾನಪದ' ಗ್ರಂಥ ಲೋಕಾರ್ಪಣೆ

'ತುಳುನಾಡಿನ ಪ್ರಾಣಿ ಜಾನಪದ' ಗ್ರಂಥ ಲೋಕಾರ್ಪಣೆ



ಉಡುಪಿ: ಪಡುಬಿದಿರೆಯ ಸಿರಿ ಕಮಲ ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ ಡಾ.ಅಶೋಕ ಆಳ್ವ ಅವರ ಸಂಶೋಧನ ಗ್ರಂಥ 'ತುಳುನಾಡಿನ ಪ್ರಾಣಿ ಜಾನಪದ' ಡಿಸೆಂಬರ್ 11 ರಂದು ಸಂಜೆ 5 ರಿಂದ ಪಡುಬಿದಿರೆಯ ಬಂಟರ ಭವನದಲ್ಲಿ ಲೋಕಾರ್ಪಣೆಗೊಂಡಿತು.


ಹಾವೇರಿಯ ಜಾನಪದ ವಿ.ವಿ.ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆಯ ಸಮಾರಂಭದಲ್ಲಿ‌ ವಿಶ್ರಾಂತ ಕುಲಪತಿ, ತುಳು- ಕನ್ನಡ ವಿದ್ವಾಂಸರಾದ ಪ್ರೊ ಬಿ.ಎ. ವಿವೇಕ ರೈ ಗಂಥ ಲೋಕಾರ್ಪಣೆ ಮಾಡಿದರು.


ಲೇಖಕರು, ಹಿರಿಯ ವಿದ್ವಾಂಸರಾದ ಡಾ.ಪಾದೆಕಲ್ಲು ವಿಷ್ಣು ಭಟ್ಟ ಅವರು ಕೃತಿ ಪರಿಚಯಿಸಿದರು.

ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ, ಪಡುಬಿದಿರೆ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎರ್ಮಾಳು ಶಶಿಧರ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿದ್ದರು ಎಂದು ಗಂಥ ಪ್ರಕಾಶಕರಾದ, ವಿಶ್ವಸ್ಥರು ಕಮಲ ಶೆಡ್ತಿ ಚಾರಿಟೇಬಲ್ ಟ್ರಸ್ಟ್ ನ ಡಾ.ವೈ ಎನ್.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم