ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಿಸೆಂಬರ್ 31ಕ್ಕೆ " ಚಾರ್ಲಿ" ಚಿತ್ರ ರಿಲೀಸ್ ಆಗಲ್ಲ....!

ಡಿಸೆಂಬರ್ 31ಕ್ಕೆ " ಚಾರ್ಲಿ" ಚಿತ್ರ ರಿಲೀಸ್ ಆಗಲ್ಲ....!

ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ "777 ಚಾರ್ಲಿ" ಸಿನಿಮಾ ಡಿಸೆಂಬರ್ 31ಕ್ಕೆ ಬಿಡುಗಡೆಯಾಗಬೇಕಾಗಿತ್ತು. ಆದರೆ ಆ ದಿನ ಸಿನಿಮಾ ರಿಲೀಸ್ ಆಗುವುದಿಲ್ಲ. 

 ಈ ಬಗ್ಗೆ  ಅಧಿಕೃತವಾಗಿ ಘೋಷಿಸಿರುವ ಚಿತ್ರತಂಡ " ನಮ್ಮ ಸಿನಿಮಾ ಡಿಸೆಂಬರ್ 31ರಂದು ರಿಲೀಸ್ ಮಾಡುವ ಯೋಜನೆಯಲ್ಲಿದ್ದೆವು. ಆದರೆ ಅದು ಸಾಧ್ಯವಾಗುತ್ತಿಲ್ಲ. ಕೆಲವು ವಿಳಂಬಗಳು ಹೊಸ ಅಧ್ಯಾಯಕ್ಕೆ ನಾಂದಿಯಾಗುತ್ತದೆ " ಎಂದು ಹೇಳಿದೆ.

ಈ ಚಿತ್ರದ ಹಿಂದಿ ವರ್ಶನ್ ಗೆ ಮುಂಬೈನ ಪ್ರತಿಷ್ಠಿತ ಸಂಸ್ಥೆಯೊಂದು ಮುಂದೆ ಬಂದಿದ್ದು ಎಲ್ಲಾ ಭಾಷೆಗೂ ಹೊಂದಿಕೆಯಾಗುವ ದಿನಾಂಕದಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದು ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಎನ್ನಲಾಗಿದೆ.

0 تعليقات

إرسال تعليق

Post a Comment (0)

أحدث أقدم