ಚಿತ್ತಾಪುರ : ರಸ್ತೆಯ ಮೇಲೆ ಹೋಗುತ್ತಿದ್ದ ವೇಳೆ ಆಯತಪ್ಪಿ ಕಾರು ಬಾವಿಗೆ ಬಿದ್ದು ಕಾರಿನಲ್ಲಿದ್ದ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.
ಸಿದ್ದಿಪೇಟ್ ಜಿಲ್ಲೆಯ ದುಬ್ಬಾಕ ಮಂಡಲ್ನ ಚಿತ್ತಾಪುರದಲ್ಲಿ ಈ ಘಟನೆ ಸಂಭವಿಸಿದೆ. ತಾಯಿ ಮತ್ತು ಮಗ ಕಾರಿನಲ್ಲಿ ರಾಮಯಂಪೇಟೆಯಿಂದ ಸಿದ್ದಿಪೇಟ್ ಕಡೆಗೆ ಹೊರಟಿದ್ದರು.
ಈ ವೇಳೆ ನಿಯಂತ್ರಣ ತಪ್ಪಿ ಕಾರು ಬಾವಿಯೊಳಗೆ ಬಿದ್ದಿದ್ದು, ಘಟನೆಯಲ್ಲಿ ಮೇದಕ್ ಜಿಲ್ಲೆಯ ನಿಜಾಂಪೇಟ್ ಮಂಡಲದ ನಂದಿಗಾಮ ಗ್ರಾಮದ ಭಾಗ್ಯಲಕ್ಷ್ಮಿ ಹಾಗೂ ಅವರ ಪುತ್ರ 26 ವರ್ಷದ ಅಕುಲ್ ಪ್ರಶಾಂತ್ ಮೃತಪಟ್ಟಿದ್ದಾರೆ.
ಇವರ ರಕ್ಷಣೆಗೆ ಹೋಗಿದ್ದ ಈಜುಗಾರ ಕೂಡ ಮೃತಪಟ್ಟಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳೀಯರ ಸಹಾಯದಿಂದ ಕಾರ್ಯಾಚರಣೆ ನಡೆಸಿ, ಬಾವಿಯಲ್ಲಿದ್ದ ನೀರನ್ನು ಮೋಟಾರುಗಳ ಮೂಲಕ ಖಾಲಿ ಮಾಡಿಸಿದ್ದಾರೆ. ನಂತರ ಕ್ರೇನ್ ಸಹಾಯದಿಂದ ಕಾರು ಹಾಗೂ ಮೃತದೇಹಗಳನ್ನು ಹೊರತೆಗೆಯಲಾಯಿತು.
إرسال تعليق