ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಂಗಳೂರು; ಕಾರು ಅಪಘಾತ, ಇಬ್ಬರು ಸಾವು

ಬೆಂಗಳೂರು; ಕಾರು ಅಪಘಾತ, ಇಬ್ಬರು ಸಾವು

 


ಬೆಂಗಳೂರು: ಕಾರು ಅಪಘಾತದಿಂದ ಇಬ್ಬರು ಸಾವನ್ನಪ್ಪಿರುವ ಘಟನೆಯೊಂದು ನಗರದ ಹೊಸಕೆರೆಹಳ್ಳಿ ಹಾಗೂ ನೈಸ್ ರೋಡ್ ಜಂಕ್ಷನ್ ಬಳಿ ನಡೆದಿದೆ.

ಬಿಂದು (29) ಹಾಗೂ ಗಾಳಿ ಹೊನ್ನಮ್ಮ (98) ಮೃತ ದುರ್ದೈವಿಗಳು.


ರಾಗಿ ಕಣ ಕೆಲಸ ಮುಗಿಸಿ ರಸ್ತೆಗೆ ಬೈಕ್​ ಅಡ್ಡ ನಿಲ್ಲಿಸಿ ಊಟ ಮಾಡುತ್ತಿದ್ದರು.

ಈ ವೇಳೆ ಅತಿ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.


ಘಟನಾ ಸ್ಥಳಕ್ಕೆ ಡಿಸಿಪಿ ಕುಲ್​ದೀಪ್​ ಕುಮಾರ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.


0 تعليقات

إرسال تعليق

Post a Comment (0)

أحدث أقدم