ರಾಮನಗರ : ಗಲಾಟೆ ಮಾಡಿಕೊಂಡು ಅಕ್ಕನ ಮನೆಗೆ ಬಂದಿದ್ದ ಪತ್ನಿಯನ್ನು ನಡುರಸ್ತೆಯಲ್ಲೇ ಪತಿ ಹತ್ಯೆಗೈದಿರುವ ಘಟನೆಯೊಂದು ಅರಳಿಮರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ರಾಮನಗರ ತಾಲೂಕಿನ ಅರಳಿಮರದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಗಳಗೌರಿ ಕೊಲೆಯಾದ ಮಹಿಳೆ. ಆರೋಪಿ ಸತೀಶ್ ಪರಾರಿಯಾಗಿದ್ದಾನೆ.
ಆನಮಾನಹಳ್ಳಿ ನಿವಾಸಿ ಪತಿ ಸತೀಶ್ ಜೊತೆ ಕಳೆದ ಒಂದು ವಾರದ ಹಿಂದೆ ಮಂಗಳಗೌರಿ ಗಲಾಟೆ ಮಾಡಿಕೊಂಡು ಅಕ್ಕನ ಮನೆಗೆ ಬಂದಿದ್ದರು.
ನಂತರ ಮಂಗಳಗೌರಿ ರಾಮನಗರ ಮಧುರಾ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಮಂಗಳಗೌರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಸತೀಶ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಮಂಗಳಗೌರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಮನಗರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮಂಗಳಗೌರಿಯ ಮೃತದೇಹ ರವಾನೆ ಮಾಡಲಾಗಿದೆ. ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
إرسال تعليق