ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೈಸೂರು ;ಮಗನನ್ನು ಕೊಲೆ ಮಾಡಿದ ತಂದೆ

ಮೈಸೂರು ;ಮಗನನ್ನು ಕೊಲೆ ಮಾಡಿದ ತಂದೆ

 


ಮೈಸೂರು: ತಂದೆ ತನ್ನ ಮಗನನ್ನೇ ಕೊಲೆ ಮಾಡಿರುವ ಘಟನೆಯೊಂದು ಜಿಲ್ಲೆಯ ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ನಡೆದಿದೆ. ಸ್ವಾಮಿ ಅಲಿಯಾಸ್ ಚೆಲುವರಾಜು (25) ಮೃತ ದುರ್ದೈವಿ.

ಚೆಲುವರಾಜು ತಂದೆ ಸಿದ್ದರಾಜು ಕೊಲೆಯ ಆರೋಪಿ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಸಿದ್ದರಾಜು ದೊಣ್ಣೆಯಿಂದ ಹೊಡೆದು ಮಗನನ್ನು ಹತ್ಯೆಗೈದಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

ಮನೆಯಲ್ಲಿ ಮಗನ ಮೃತದೇಹ ಇರಿಸಿ ಜಮೀನಿಗೆ ತೆರಳಿದ ಆರೋಪಿ ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದಾನೆ. ಈತನ ಬಗ್ಗೆ ಅನುಮಾನಗೊಂಡ ಸ್ಥಳೀಯರಿಂದ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಘಟನೆ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಹೆಚ್​.ಡಿ ಕೋಟೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

0 تعليقات

إرسال تعليق

Post a Comment (0)

أحدث أقدم