ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಕ್ಷಮ ದ.ಕ ಜಿಲ್ಲಾ ಘಟಕದಿಂದ ವಿಶ್ವ ವಿಶಿಷ್ಟ ಚೇತನರ ದಿನಾಚರಣೆ, ದಿವ್ಯಾಂಗರಿಗೆ ಗಾಲಿ ಕುರ್ಚಿ ವಿತರಣೆ

ಸಕ್ಷಮ ದ.ಕ ಜಿಲ್ಲಾ ಘಟಕದಿಂದ ವಿಶ್ವ ವಿಶಿಷ್ಟ ಚೇತನರ ದಿನಾಚರಣೆ, ದಿವ್ಯಾಂಗರಿಗೆ ಗಾಲಿ ಕುರ್ಚಿ ವಿತರಣೆ

ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ


ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಘಟಕ ಮತ್ತು ಜಿಲ್ಲಾ ವಿಕಲ ಚೇತನರ ಪುನರ್ವಸತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ 'ವಿಶ್ವ ವಿಕಲ ಚೇತನರ ದಿನ' ವನ್ನು ನಗರದ ವಿಠೋಬ ದೇವಸ್ಥಾನ (ವಿ.ಟಿ) ರಸ್ತೆಯ ಚೇತನಾ ಬಾಲ ವಿಕಾಸ ಕೇಂದ್ರದ ಸಭಾಂಗಣದಲ್ಲಿ ನಡೆಸಲಾಯಿತು.


ಈ ಸಂದರ್ಭದಲ್ಲಿ ಸಕ್ಷಮ ವತಿಯಿಂದ ಅರ್ಹ ದಿವ್ಯಾಂಗರಿಗೆ ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು. ಅಲ್ಲದೆ ನಿರಾಮಯ, ಯುಡಿಐಡಿ ಹಾಗೂ ಕಾನೂನಾತ್ಮಕ ಪೋಷಕತ್ವದ ಬಗ್ಗೆ ಮಾಹಿತಿ ನೀಡಲಾಯಿತು. ಸಕ್ಷಮದ ಪ್ರಾಂತ್ಯ ಕೋಶಾಧ್ಯಕ್ಷ ಜಯದೇವ ಕಾಮತ್‌ ಸಕ್ಷಮದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.


ರೆಡ್‌ಕ್ರಾಸ್‌ ಸಂಸ್ಥೆಯ ದ.ಕ ಜಿಲ್ಲಾ ಘಟಕಾಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವಿಶಿಷ್ಟ ಚೇತನರು ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು ಅವರ ಸಾಧನೆಗಳನ್ನು ಗೌರವಿಸುವ ಕೆಲಸ ನಡೆಯಬೇಕು. ರೆಡ್‌ಕ್ರಾಸ್‌ ಈ ನಿಟ್ಟಿನಲ್ಲಿ ಸಹಾಯ ಒದಗಿಸಲು ಬದ್ಧವಾಗಿದೆ ಎಂದರು.


ಸಕ್ಷಮ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವಿ. ಮುರಳೀಧರ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಸಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಹಾಗೂ ರೆಡ್‌ಕ್ರಾಸ್‌ನ ದ.ಕ ಜಿಲ್ಲಾ ದಿವ್ಯಾಂಗ ಕೋಶದ ಮುಖ್ಯಸ್ಥರಾದ ಡಾ. ಕೆ.ಆರ್‌ ಕಾಮತ್‌, ಸಕ್ಷಮ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ವಿನೋದ್ ಶೆಣೈ, ಕಾರ್ಯದರ್ಶಿಗಳಾದ ಹರೀಶ್‌ ಪ್ರಭು, ಬಿ.ಕೆ ಕುಸುಮಾಧರ್‌, ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم