ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೆಡಿಕಲ್ ಕಾಲೇಜು ಕಿರಿಯ ವೈದ್ಯ ಯುವತಿ ಮೇಲೆ ಅತ್ಯಾಚಾರ

ಮೆಡಿಕಲ್ ಕಾಲೇಜು ಕಿರಿಯ ವೈದ್ಯ ಯುವತಿ ಮೇಲೆ ಅತ್ಯಾಚಾರ

 


ಮೀರತ್: ಮದುವೆ ನೆಪವೊಡ್ಡಿ ವೈದ್ಯ ಅತ್ಯಾಚಾರ ಮಾಡಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದು, ನೌಚಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಮುಂಬೈನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಯುವತಿ ಮೇಲೆ ಉತ್ತರ ಪ್ರದೇಶದ ಮೀರತ್ ಮೆಡಿಕಲ್ ಕಾಲೇಜಿನ ಕಿರಿಯ ವೈದ್ಯ ಅತ್ಯಾಚಾರ ಎಸಗಿದ್ದಾನೆ.

ಮದುವೆಯಾಗುವುದಾಗಿ ನಂಬಿಸಿ ಇಂತಹ ಕೃತ್ಯವೆಸಗಿದ್ದು, ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ದೂರಲಾಗಿದೆ.

ಇಬ್ಬರೂ ಪರಿಚಿತರಾಗಿದ್ದು ಫೋನ್ ಮೂಲಕವೂ ಸಂಪರ್ಕದಲ್ಲಿದ್ದರು. ಹಲವು ಬಾರಿ ನಗರದ ಹಲವು ಹೋಟೆಲ್ ಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಆತ ಫೋಟೋಗಳನ್ನು ತೆಗೆದುಕೊಂಡಿದ್ದಾನೆ ಎಂದು ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


0 تعليقات

إرسال تعليق

Post a Comment (0)

أحدث أقدم