ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿರುವ 'ಗಂಧದಗುಡಿ' ಟೀಸರ್ ಬಿಡುಗಡೆಯಾಗಿದೆ. ಪಿ.ಆರ್.ಕೆ. ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಅಪ್ಪು ಕರುನಾಡಿನ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಅಮೋಘವರ್ಷ ಅವರ ಜೊತೆಗೂಡಿ ಸಿದ್ಧಪಡಿಸಿದ್ದಾರೆ. '
ಗಂಧದಗುಡಿ' ಹೆಸರಿನ ಡಾಕ್ಯುಮೆಂಟರಿ ಕನ್ನಡ ರಾಜ್ಯೋತ್ಸವದ ದಿನ ನವೆಂಬರ್ 1 ರಂದು ಬಿಡುಗಡೆಯಾಗಬೇಕಿತ್ತು. ಅದು ಅಪ್ಪು ಕನಸು ಕೂಡ ಆಗಿತ್ತು. ಅದಕ್ಕಾಗಿ ಸಿದ್ಧತೆ ಕೂಡ ಮಾಡಿಕೊಂಡಿದ್ದರು. ಆದರೆ, ಅಕ್ಟೋಬರ್ 29 ರಂದು ಅಕಾಲಿಕವಾಗಿ ಅಪ್ಪು ಅಗಲಿದ್ದಾರೆ. ಅವರ ಕನಸನ್ನು ನನಸು ಮಾಡಲು ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಗಿದ್ದಾರೆ. ಅಂತೆಯೇ ಇಂದು ಟೀಸರ್ ಬಿಡುಗಡೆಯಾಗಿದೆ.
ಟೀಸರ್ ನಲ್ಲಿ ಡಾ. ರಾಜಕುಮಾರ್ ಅವರು 'ಗಂಧದ ಗುಡಿ' ಚಿತ್ರದಲ್ಲಿ ಹೇಳುವ 'ನಿನ್ನ ಕೈಮುಗಿದು ಕೇಳ್ಕೋತಿನಿ ಗಂಧದಗುಡಿ ಉಳಿಸು' ಎನ್ನುವ ಡೈಲಾಗ್ ಇದೆ.
ರಾಜ್ಯದ ಅರಣ್ಯ, ಸಮುದ್ರ, ಜಲಪಾತ ಸೇರಿ ಅಪರೂಪದ ದೃಶ್ಯಗಳು ಕುತೂಹಲಕಾರಿಯಾಗಿ ಮೂಡಿಬಂದಿವೆ. 2022 ರಲ್ಲಿ ಅಪ್ಪು ಅವರನ್ನು ಮತ್ತೆ ತೆರೆ ಮೇಲೆ ಕಾಣುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿದೆ.
إرسال تعليق