ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ಮಂಗಳೂರಿನ ವ್ಯಕ್ತಿಗೆ 5.30 ಲಕ್ಷಕ್ಕೂ ಅಧಿಕ ವಂಚನೆ

ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ಮಂಗಳೂರಿನ ವ್ಯಕ್ತಿಗೆ 5.30 ಲಕ್ಷಕ್ಕೂ ಅಧಿಕ ವಂಚನೆ


ಮಂಗಳೂರು: ಮಂಗಳೂರಿನಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಆಯ್ಕೆಯಾಗಿದ್ದೀರಿ ಎಂಬ ಸಂದೇಶ ಕಳುಹಿಸಿ ನಂತರ ಹಂತ ಹಂತವಾಗಿ 5,31,200 ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಮೊದಲಿಗೆ ಈ ವ್ಯಕ್ತಿಗೆ ಪಾರ್ಟ್ ಟೈಂ ಜಾಬ್ ಗೆ ಆಯ್ಕೆಯಾಗಿದ್ದೀರಿ ಎಂಬ ಸಂದೇಶ ಬಂದಿತ್ತು. ಅದಕ್ಕೆ ಇವರು ಪ್ರತಿಕ್ರಿಯಿಸಿ ಸಂದೇಶ ಕಳುಹಿಸಿದಾಗ ವಂಚಕರು ಟೆಲಿಗ್ರಾಮ್ ನಲ್ಲಿ ಒಂದು ಲಿಂಕ್ ನ್ನು ಕಳುಹಿಸಿದ್ದರು. ಆ ಲಿಂಕ್ ಓಪನ್ ಮಾಡಿ ವೆಬ್ಸೈಟ್ ನಲ್ಲಿ 200ರೂಪಾಯಿ ಹೂಡಿಕೆ ಮಾಡಿದ್ದರು. ಅದಕ್ಕೆ ಲಾಭಾಂಶವೆಂದು 380 ರೂಪಾಯಿ ಮತ್ತೆ ಹಿಂದೆ ಕಳುಹಿಸಿದಾಗ ನಂಬಿ ಹೋದ ವ್ಯಕ್ತಿ ಕ್ಯೂಆರ್ ಕೋಡ್ ಗೆ ಹಂತಹಂತವಾಗಿ ಐದು ಲಕ್ಷಕ್ಕೂ ಹೆಚ್ಚು ಹಣ ಪಾವತಿಸಿ ಈಗ ವಂಚನೆಗೊಳಗಾಗಿದ್ದಾರೆ.  

ಹಾಕಿದ ಹಣಕ್ಕೆ ಯಾವುದೇ ರೀತಿಯ ಲಾಭಾಂಶ ಬಾರದೇ ಹೋದಾಗ ಮೋಸದ ಅರಿವಾಗಿ ಇವರು ಮಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ. ಇದು ಎಲ್ಲರಿಗೂ ಎಚ್ಚರಿಕೆಯ ನೈಜ ನಿದರ್ಶನವೂ ಆಗಿದೆ.


0 Comments

Post a Comment

Post a Comment (0)

Previous Post Next Post