ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿ IQAC ಅಡಿಯಲ್ಲಿ ರಾಜ್ಯಶಾಸ್ತ್ರ ವಿಭಾಗ ವತಿಯಿಂದ ಮಾನವ ಹಕ್ಕುಗಳ ಸಂಘದ ಸಹಯೋಗದೊಂದಿಗೆ ವಿಶ್ವ ಮಾನವ ಹಕ್ಕುಗಳ ದಿನದ ಪ್ರಯುಕ್ತ "ಪ್ರಜಾಸತ್ತಾತ್ಮಕ ಆಡಳಿತ ಯುಗದಲ್ಲಿ ಮಾನವ ಹಕ್ಕುಗಳು" ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಇಂದು (ಡಿ.10) ಆಯೋಜಿಲಾಯಿತು.
ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಪ್ರೊ. ಶೇಖರ್ ಇವರು ಪ್ರಸ್ತಾವಿಕ ನುಡಿಯೊಂದಿಗೆ ಕಾರ್ಯಕ್ರಮದ ಮುಖ್ಯ ಅಥಿತಿಗಳ ಕಿರು ಪರಿಚಯವನ್ನು ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ| ಲಕ್ಷ್ಮಿಕಾಂತ ಎ ಇವರು ವಿಶೇಷ ಉಪನ್ಯಾಸಕರಾಗಿ ಆಗಮಿಸಿ, ಮಾನವ ಹಕ್ಕುಗಳು ಎಂದರೇನು? ಮಾನವ ಹಕ್ಕುಗಳು ಯಾವಾಗ ಅಸ್ತಿತ್ವಕ್ಕೆ ಬಂತು? ಮಾನವ ಹಕ್ಕುಗಳ ಮೂಲ ಯಾವುದು? ಮಾನವ ಹಕ್ಕುಗಳನ್ನು ನಿಜವಾಗಿಯೂ ಮಾನವರು ಉಪಯೋಗಿಸಿದ್ದಾರೆಯೇ? ಇಂದಿನ ಯುವ ಸಮುದಾಯದ ಜವಾಬ್ದಾರಿಗಳೇನು? ಮಾನವ ಹಕ್ಕುಗಳನ್ನು ಮಾನವರಾಗಿ ನಾವು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಬಹಳ ಅರ್ಥಪೂರ್ಣವಾಗಿ ವಿದ್ಯಾರ್ಥಿಗಳಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರವಿಶಂಕರ್ ಅವರು ಕಾರ್ಯಕ್ರಮದ ಬಗೆಗೆ ಹಿತನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾದ ಒಲಿಂಡರವರು, IQAC ಸಂಯೋಜಕರಾದ ಲೋಕೇಶ್ ರವರು, ಉಪನ್ಯಾಸಕರಾದ ಪ್ರೊ. ರಾಜೇಶ್ವರಿ, ಪ್ರೊ. ಗೀತಾ ಹಾಗೂ ಉಪನ್ಯಾಸಕರಾದ ಸುಜಿತ್ ಅವರು ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಶಿವಕುಮಾರ್ ಇವರು ಸ್ವಾಗತಿಸಿ ಅಕ್ಷತಾ ಧನ್ಯವಾದವಿತ್ತರು. ತುಳಸಿ ಇವರು ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment