ಮುದ್ದೇಬಿಹಾಳ: ಇಬ್ಬರು ಮಕ್ಕಳ ತಂದೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಇರುವ ತಾಲೂಕು ಪಂಚಾಯಿತಿಯ ಹಳೇ ಕ್ವಾಟ್ರಸ್ ನಲ್ಲಿ ಬೆಳಕಿಗೆ ಬಂದಿದೆ.
ಗಣೇಶ ನಗರದ ಗಿರಿಜಾಶಂಕರ ಚಿತ್ರಮಂದಿರ ಏರಿಯಾ ನಿವಾಸಿ ವೀರೇಶ ಯಮನಯ್ಯ ಚಿಮ್ಮಲಗಿ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹೊಟೇಲ್, ಖಾನಾವಳಿಗಳಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ, ವಿಪರೀತ ಮದ್ಯ ಸೇವನೆಯ ನಶೆಯಲ್ಲೇ ಪ್ಲಾಸ್ಟಿಕ್ ವೈರ್ ನಿಂದ ನೇಣು ಬಿಗಿದುಕೊಂಡು ಗುರುವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ.
ಈತನಿಗೆ ಪತ್ನಿ, ಸಣ್ಣ ಇಬ್ಬರು ಮಕ್ಕಳಿದ್ದಾರೆ.
ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪಿಎಸೈ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಗೆ ಕಳುಹಿಸಿ ಕಾನೂನು ಕ್ರಮ ಕೈಗೊಂಡರು.
Post a Comment