ಉಡುಪಿ: ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಹೋಗೋದು ಎಂದರೆ ಮಕ್ಕಳಿಗೆಲ್ಲ ಒಂದು ತೆರನಾದ ಸಂಭ್ರಮ. ಅದು ಶಿಸ್ತನ್ನು ಸಾಂಕೇತಿಸುವ ಮಾನದಂಡವೂ ಹೌದು. ಹೀಗಿರುವಾಗ ಭೌತಿಕ ತರಗತಿ ಪ್ರಾರಂಭವಾಗಿ ಇಷ್ಟು ತಿಂಗಳು ಕಳೆದಿದ್ದರೂ ಮಕ್ಕಳಿಗೆ ಇನ್ನು ಸಮವಸ್ತ್ರದ ಪೂರೈಕೆ ಆಗಲಿಲ್ಲ. ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ರಾಜ್ಯ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಸರ್ಕಾರದ ಸರ್ವ ಶಿಕ್ಷಾ ಅಭಿಯಾನದಿಂದ ಸಮವಸ್ತ್ರವನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಈ ವರ್ಷ ಮಕ್ಕಳು ಸಾಮಾನ್ಯ ದಿರಿಸಿನಲ್ಲಿ ಶಾಲೆಗೆ ಹೋಗುವಂತಾಗಿದೆ. ಆದಷ್ಟು ಶೀಘ್ರವಾಗಿ ಸಮವಸ್ತ್ರ ಪೂರೈಕೆ ಮಾಡಬೇಕೆಂದು ಸರ್ಕಾರಕ್ಕೆ ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.
ಶಾಲೆ ಶುರುವಾದರು ಸಮವಸ್ತ್ರದ ಕೊರತೆ
byArpitha
-
0
إرسال تعليق