ಕಾವೂರು: ಶಿವಳ್ಳಿ ಸ್ಪಂದನ ಕಾವೂರು ಮತ್ತು ದೇರೆಬೈಲು ವಲಯದ ಜಂಟಿ ಸಹಯೋಗದಲ್ಲಿ ಡಿ.5ರಂದು ಭಾನುವಾರ ಬೆಳಗ್ಗೆ ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮೊದಲನೇ ಮಹಡಿಯ ಸಭಾಭವನದಲ್ಲಿ ನಗರದ ಪ್ರಖ್ಯಾತ ಹಿರಿಯ ತಜ್ಞ ವೈದ್ಯರಿಂದ ಉಚಿತ ಅರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ರಕ್ತ ಪರೀಕ್ಷೆ (ಮಧುಮೇಹ), ರಕ್ತದೊತ್ತಡ (ಬಿ.ಪಿ), ನೇತ್ರ ತಪಾಸಣೆ, ಪರೀಕ್ಷೆ ಮತ್ತು ಇವುಗಳ ಬಗ್ಗೆ ಮಾಹಿತಿ ಹಾಗೂ ನಿಯಂತ್ರಣ ವಿಧಾನಗಳ ಬಗ್ಗೆ ತಿಳಿಸಲಾಗುತ್ತದೆ.
ಸಮಾಜ ಬಾಂಧವರು ಮತ್ತು ಸಾರ್ವಜನಿಕರು ಕೂಡ ಈ ಶಿಬಿರದಲ್ಲಿ ಭಾಗವಹಿಸಬಹುದು ಎಂದು ಶಿವಳ್ಳಿ ಸ್ಪಂದನ ದೇರೆಬೈಲು-ಕಾವೂರು ವಲಯದ ಪ್ರಕಟಣೆ ತಿಳಿಸಿದೆ.
ಭಾನುವಾರ ಬೆಳಗ್ಗೆ 8:30ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ನಂತರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಾಗುವುದು. ಮಧ್ಯಾಹ್ನ 1 ಗಂಟೆಯ ವರೆಗೂ ಶಿಬಿರ ನಡೆಯಲಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق