ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರಿನ ಬಸ್ ಗಳಲ್ಲಿ ಇನ್ನು ಡಿಜಿಟಲ್ ಟಿಕೆಟ್

ಮಂಗಳೂರಿನ ಬಸ್ ಗಳಲ್ಲಿ ಇನ್ನು ಡಿಜಿಟಲ್ ಟಿಕೆಟ್


ಮಂಗಳೂರು: ಬಸ್ ಗಳಲ್ಲಿ ಕೂಡ ಈಗ ನೂತನವಾದ ಟಿಕೆಟ್ ವಿಧಾನ ಜಾರಿಯಾಗಿದೆ. ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘ ಪರಿಚಯಿಸಿದ್ದ ಪ್ರಿಪೇಯ್ಡ್ ಟ್ರಾವೆಲ್ ಕಾರ್ಡ್ ಗಳ ಮುಖೇನ ಇನ್ನು ಪ್ರಯಾಣಿಕರು ಪ್ರಯಾಣಿಸಬಹುದು. ಈ ಕಾರ್ಡನ್ನು " ಚಲೋ ಕಾರ್ಡ್ " ಎಂದು ಕೂಡ ಕರೆಯಲಾಗುತ್ತದೆ.

ಈ ವಿನೂತನವಾದ ವ್ಯವಸ್ಥೆಯಲ್ಲಿ ಪ್ರಯಾಣಿಕರೇ ಕಂಡಕ್ಟರ್ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಹೇಗೆಂದರೆ ತಾವೇ ತಮ್ಮ ಚಲೋ ಕಾರ್ಡನ್ನು ಟ್ಯಾಪ್ ಮಾಡುವ ಮೂಲಕ ತಮ್ಮ ಟಿಕೆಟನ್ನು ತಾವೇ ಪಡೆದುಕೊಳ್ಳುವ ಸ್ವಯಂ ಚಾಲಿತ ಟಿಕೆಟ್ ಯಂತ್ರವನ್ನು ಪರಿಚಯಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಮಾತನಾಡಿ "ಮುಖ್ಯವಾಗಿ ಮಂಗಳೂರಿನಲ್ಲಿ ಸಂಚರಿಸುವ ಸಿಟಿ ಬಸ್ ಗಳಲ್ಲಿ ಇದನ್ನು ಅಳವಡಿಸಲಾಗಿದೆ. ಈ ಕಾರ್ಡನ್ನು ಉಪಯೋಗಿಸುವ ಪ್ರಯಾಣಿಕರಿಗೆ ವಿಶೇಷವಾಗಿ 10% ರಿಯಾಯಿತಿ ಕೂಡ ನೀಡಲಾಗಿದೆ. ಆದ್ದರಿಂದ ಮುಕ್ತವಾಗಿ  ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು " ಎಂದು  ತಿಳಿಸಿದರು.

0 Comments

Post a Comment

Post a Comment (0)

Previous Post Next Post