ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮದುವೆ ದಿಬ್ಬಣ ಬಸ್ ಬ್ರೇಕ್ ಫೇಲ್ಯೂರ್; ಸೇತುವೆಗೆ ಡಿಕ್ಕಿ

ಮದುವೆ ದಿಬ್ಬಣ ಬಸ್ ಬ್ರೇಕ್ ಫೇಲ್ಯೂರ್; ಸೇತುವೆಗೆ ಡಿಕ್ಕಿ

 


ಧಾರವಾಡ: ಮದುವೆ ದಿಬ್ಬಣಕ್ಕೆಂದು ಹೊರಟಿದ್ದ ಕುಟುಂಬಸ್ಥರು, ಸಂಬಂಧಿಕರೆಲ್ಲಾ ಇದ್ದ ಬಸ್ ಬ್ರೇಕ್ ಫೇಲ್ಯೂರ್ ಆದ ಘಟನೆಯೊಂದು ನಡೆಯಿತು. ಡ್ರೈವರ್ ಸಮಯ ಪ್ರಜ್ಞೆಯಿಂದ ಯಾರಿಗೂ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ.

ಈ ಘಟನೆ ಧಾರವಾಡ ನವಲೂರು ಕ್ರಾಸ್ ಬಳಿ ನಡೆದಿದೆ. ಬಸ್ ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.‌ ಬಸ್ ಜನರನ್ನು ಹತ್ತಿಸಿಕೊಂಡು ಹೋಗುವಾಗ ಮಾರ್ಗ ಮಧ್ಯೆದಲ್ಲಿ ಬ್ರೇಕ್ ಫೇಲ್ಯೂರ್ ಆಗಿರೋದು ಗೊತ್ತಾಗಿದೆ. ಚಾಲಕ ಆತಂಕಗೊಳ್ಳದೆ ಜನರನ್ನು ಕಾಪಾಡಲು ಹರಸಾಹಸ ಪಟ್ಟಿದ್ದರಿಂದ ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಅಪಾಯ ತಪ್ಪಿಸಿದ್ದಾರೆ.

ಬಸ್ ನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ನ ಮುಂದುಗಡೆ ಗಾಜು ಪುಡಿ ಪುಡಿಯಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಎಲ್ಲರ ಪ್ರಾಣ ಉಳಿದಿದೆ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم