ಮನಸ್ಸು ನಮ್ಮ ಎಲ್ಲಾ ಕಾಯವನ್ನು ನಿಯಂತ್ರಿಸುವ ಶಕ್ತಿ. ಕೆಲವೊಮ್ಮೆ ನಮ್ಮ ಕೈಮೀರಿ ಅದು ಏನನ್ನು ಮಾಡಲು ಕೂಡ ಸಿದ್ಧವಾಗಿರುತ್ತೆ. ಭಾವನೆ, ಮೂಡ್ ಹೀಗೆ ಏನೇನೋ ಶಬ್ಧಗಳಿಂದ ಕರೀತೇವಲ್ಲ ಅದನ್ನೇ " ಮನಸ್ಸು" ಅನ್ನೋದು. ಜಂಜಾಟದ ಬದುಕಿನಲ್ಲಿ ನಾವು ಮನಸ್ಸಿನ ಸುಪ್ತತೆಗಾಗಿ ಹೋರಾಡುತ್ತೇವೆ. ದಿನವಿಡೀ ದುಡಿದು ದಣಿದು ಬಂದ ಅಪ್ಪ ಮನಸ್ಸಿನ ಖುಷಿಗೆ ಮಗುವಿನೊಂದಿಗೆ ಮಗುವಾಗುತ್ತಾರೆ, ಆದಾಯವಿಲ್ಲದೆ ದುಡಿಯುವ ತಾಯಿ ಮನಸ್ಸಿನ ಸುಖಕ್ಕಾಗಿ ತಾಯಿತನವನ್ನೇ ಸಂಭ್ರಮಿಸುತ್ತಾಳೆ. ಬೆಳೆಯೋ ಮಕ್ಕಳು ತಮ್ಮ ಮನದ ಸುಖಕ್ಕೆ ಆಟವಾಡುತ್ತಾರೆ, ಮನರಂಜಿಸುತ್ತಾರೆ. ದೈಹಿಕ ಆರೋಗ್ಯ ನಮಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ನಮಗೆ ಮಾನಸಿಕ ಆರೋಗ್ಯ ಕೂಡ ಅವಶ್ಯವಾಗುತ್ತದೆ. ಅದೆಷ್ಟೋ ಬಾರಿ ನಮ್ಮದಲ್ಲದ ವಿಷಯಗಳಿಗೆ ಚಿಂತಿಸುತ್ತೇವೆ. ಅಪರಿಮಿತ ಆಸೆಗಳ ಪೂರೈಕೆ ಸಾಧ್ಯವಾಗದಿದ್ದಾಗ ಮನಸ್ಸು ಹಾಳುಮಾಡಿಕೊಳ್ಳುತ್ತೇವೆ. ಇಲ್ಲಸಲ್ಲದ ವಿಚಾರಗಳಿಗೆ ತಲೆಕೊಡದೆ ಸಾಧಿಸುವ ಛಲ ಮಾತ್ರ ಕಣ್ಣೆದುರಲ್ಲಿದ್ದರೆ ಮನಸ್ಸು ಜಾತ್ರೆ ಜಾಗ ಆಗುವುದಿಲ್ಲ ಅಲ್ಲವೇ....?
إرسال تعليق