ದೇಶ ತಂತ್ರಜ್ಞಾನದಲ್ಲಿ ದಾಪುಗಾಲು ಇಡುವುದರ ಜೊತೆಗೆ ಡಿಜಿಟಲ್ ಇಂಡಿಯಾಕ್ಕೆ ಕೂಡ ಒತ್ತು ನೀಡುತ್ತಿದೆ. ಈ ಬಗ್ಗೆ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇದೆ. ಆದರೆ ಇದರ ಮಧ್ಯೆ ಇಂತಹ ಸಂದರ್ಭವನ್ನು ವಿದ್ರೋಹಿ ಸಂಘಟನೆಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದ್ದು ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ವಂಚಿಸಲಾಗುತ್ತಿದೆ. "ಬ್ಯಾಂಕ್ ವ್ಯವಹಾರದಿಂದ ಹಿಡಿದು ಪ್ರತಿಯೊಂದು ವ್ಯವಹಾರವೂ ಆನ್ಲೈನ್ ಮುಖೇನ ನಡೆಯುತ್ತಿದ್ದು ಸೈಬರ್ ಅಪರಾಧವೂ ಕೂಡ ಜೊತೆಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯೂ ಹೊರತಾಗಿಲ್ಲ "ಎನ್ನುತ್ತಾರೆ ಹಿರಿಯ ಸೈಬರ್ ಅಧಿಕಾರಿ. ಆನ್ಲೈನ್ ವಂಚನೆಯ ಜಾಲದ ಶೋಧ ನಡೆಸಿದಾಗ ಇದರ ಹಿಂದೆ ನಕ್ಸಲ್ ಸೇರಿದಂತೆ ಅನೇಕ ವಿದ್ರೋಹಿ ಸಂಘಟನೆಗಳ ಕೈವಾಡವಿರುವುದು ಬಯಲಾಗಿದೆ.
إرسال تعليق