"ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಾಹಿತಿ, ಸಮಾಜ ಸೇವಕಿ, ಮಾಲತಿ ಶೆಟ್ಟಿ ಮಾಣೂರು ಅವರಿಗೆ ಬೆಂಗಳೂರಿನ ಜನತಾ ಸಮಾಜ ಸೇವಾ ಟ್ರಸ್ಟ್ (ರಿ) ಪದ್ಮಭೂಷಣ ಡಾ ಎ. ಪಿ .ಜೆ ಅಬ್ದುಲ್ ಕಲಾಂರವರ 90ನೇ ಜನ್ಮದಿನಾಚರಣೆಯ ಅಂಗವಾಗಿ ನೀಡುವ ಪದ್ಮಭೂಷಣ ಡಾ ಎ. ಪಿ. ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ಎಚ್. ಸದಾಶಿವ, ಡಾ. ಕೆಂಚನೂರು ಶಂಕರ್, ಪರಮ ಪೂಜ್ಯ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿ ಬೇಲಿಮಠ ಮಹಾ ಸಂಸ್ಥಾನ ಬೆಂಗಳೂರು, ಕರ್ನಾಟಕ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ನಾಗಲಕ್ಷ್ಮಿ ಬಾಯಿ, ಕೇಂದ್ರ ಸೆನ್ಸಾರ್ ಬೋರ್ಡ್ ಸದಸ್ಯರಾದ ಡಾ. ಮೀರಾ ಅನುರಾಧ ಪಡಿಯಾರ್, ಜೂನಿಯರ್ ರಾಜ್ ಕುಮಾರ್ ಖ್ಯಾತಿಯ ಶ್ರೀ ಮುನಿಕುಮಾರ್ ಉಪ ನಿರೀಕ್ಷ ಕುಂದಾಪುರ ಶ್ರೀಮತಿ ಸುಧಾ ಪ್ರಭು, ಡಾ. ಅಬ್ದುಲ್ ಕಲಾಂ ಅವರ ಆತ್ಮೀಯ ಗೆಳೆಯ, ಒಡನಾಡಿ ಇತಿಹಾಸ ತಜ್ಞರಾದ ಡಾ.ನಂದಿ ವೆಂಕಟೇಶ್ ಮೂರ್ತಿ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق