ನಟಿ ಪ್ರೇಮ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಅಭಿನಯಿಸಿದ ಎರಡನೇ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಪಡೆದ ಪತಿಭಾನ್ವಿತ ನಟಿ. ಮೊದಲ ಸಿನಿಮಾ ಸವ್ಯಸಾಚಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರೇಮಾ, ಅಭಿನಯಿಸಿದ 2ನೇ ಸಿನಿಮಾ ಓಂ.
2017ರಲ್ಲಿ ತೆರೆಕಂಡ ಉಪೇಂದ್ರ ಮತ್ತೆ ಬಾ ಚಿತ್ರದಲ್ಲಿ ನಟಿಸಿದ ನಂತರ ಸಿನಿಮಾಗಳಿಂದ ಕೊಂಚ ದೂರವಾಗಿದ್ದ ಪ್ರೇಮ ಈಗ ಮತ್ತೆ ಸಿನಿಮಾಗೆ ಮರಳಿದ್ದಾರೆ. ವಿಕ್ರಂ ಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದಲ್ಲಿ ಪ್ರೇಮಾ ಪ್ರಮುಖ ಹಾಗೂ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಲ ವಕೀಲೆಯಾಗಿ ತೆರೆ ಮೇಲೆ ಮಿಂಚಲಿದ್ದಾರಂತೆ.
ಸೋನು ಗೌಡ, ಪ್ರೇಮ, ನಿಶಾನ್ ನಾಣಯ್ಯ ಅಭಿನಯದ ವೆಡ್ಡಿಂಗ್ ಗಿಪ್ಟ್ ಸಿನಿಮಾದ ಮುಹೂರ್ತ ಸಮಾರಂಭ ಹನುಮಂತನಗರದ ಕುಮಾರಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆರಂಭ ಫಲಕ ತೋರಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق