ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಟೋ ಗೆ ಟಿಪ್ಪರ್ ಡಿಕ್ಕಿ ; ಐದು ಮಂದಿ ಸಾವು

ಆಟೋ ಗೆ ಟಿಪ್ಪರ್ ಡಿಕ್ಕಿ ; ಐದು ಮಂದಿ ಸಾವು

 


ಮಂಡ್ಯ: ಒಂದೇ ಕುಟುಂಬದ ಐದು ಮಂದಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆಯೊಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ಗೇಟ್ ಬಳಿ ನಡೆದಿದೆ.


ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆ, ದಡದಪುರ ಗ್ರಾಮದ ಮುತ್ತಮ್ಮ(45), ಮಗಳು ಬಸಮ್ಮಣಿ(30), ಮಗ ವೆಂಕಟೇಶ(25), ಬಸಮ್ಮಣಿ ಅವರ ಮಕ್ಕಳಾದ 8 ವರ್ಷದ ಚಾಮುಂಡೇಶ್ವರಿ, 2 ವರ್ಷದ ಗಂಡು ಮಗು ಮೃತಪಟ್ಟಿದ್ದು, ಘಟನೆಯಲ್ಲಿ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ದೇವಸ್ಥಾನವೊಂದಕ್ಕೆ ಮುತ್ತಮ್ಮ ಮತ್ತು ಕುಟುಂಬದ ಸದಸ್ಯರು ಭೇಟಿ ನೀಡಿ ಮದ್ದೂರು ಕಡೆಯಿಂದ ಆಟೋದಲ್ಲಿ ಹಿಂತಿರುಗುತ್ತಿದ್ದರು.

ಈ ಸಂದರ್ಭದಲ್ಲಿ ಮಳವಳ್ಳಿಯಿಂದ ಮದ್ದೂರಿನತ್ತ ತೆರಳುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿಯೇ ಮುತ್ತಮ್ಮ ಮೃತಪಟ್ಟಿದ್ದು, ಇನ್ನೂ ಇಬ್ಬರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.


ಘಟನಾ ಸ್ಥಳಕ್ಕೆ ಸಿಪಿಐ ಎ.ಕೆ.ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


0 تعليقات

إرسال تعليق

Post a Comment (0)

أحدث أقدم