ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಂಡೀಪುರದ ರಾಷ್ಟ್ರೀಯ ಉದ್ಯಾನವನದ ಮೂಗ ಎನ್ನುವ ಹುಲಿ ಇನ್ನಿಲ್ಲ

ಬಂಡೀಪುರದ ರಾಷ್ಟ್ರೀಯ ಉದ್ಯಾನವನದ ಮೂಗ ಎನ್ನುವ ಹುಲಿ ಇನ್ನಿಲ್ಲ

 


ಮೈಸೂರು: ಜಿಲ್ಲೆಯ ಬಂಡೀಪುರದ ರಾಷ್ಟ್ರೀಯ ಉದ್ಯಾನವನಕ್ಕೆ ಯಾರೇ ಟೈಗರ್ ಸಫಾರಿಗೆ ತೆರಳಿದ್ರೂ, ಅವರಿಗೆ ಮೂಗ ಹುಲಿಯ ದರ್ಶನವಾಗುತ್ತಿತ್ತು. ಈ ಹುಲಿಯನ್ನು ಕಂಡ ಪ್ರವಾಸಿಗರು ಕೂಡ ಖುಷಿ ಆಗ್ತಾ ಇದ್ದರು.

ಪ್ರವಾಸಿಗರ ನೆಚ್ಚಿನ ವ್ಯಾಘ್ರನಾಗಿದ್ದಂತ ಮೂಗ, ಅಕ್ಟೋಬರ್ 20ರಂದು ಆನೆಯೊಂದಿಗೆ ಕಾದಾಡಿ ಗಂಭೀರವಾಗಿ ಗಾಯಗೊಂಡಿತ್ತು.

ಮೂಗ ಹುಲಿಗೆ ಆನೆಯೊಂದಿಗೆ ಕಾದಾಡುವಂತ ವೇಳೆಯಲ್ಲಿ ಆನೆ ದಂತ ಬಲವಾಗಿ ತಿವಿದಿದ್ದರಿಂದ ಕರುಳು ಹಾಗೂ ಶ್ವಾಸಕೋಶದ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿದ್ದವು.

ಪ್ರವಾಸಿಗರ ನೆಚ್ಚಿನ ಹುಲಿಯಾಗಿದ್ದಂತ ಮೂಗನಿಗೆ ಪಶು ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು.


ಸುಮಾರು ಒಂದು ತಿಂಗಳಿನಿಂದ ಪಶು ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಂತ ವ್ಯಾಘ್ರ, ಇಂದು ಚಿಕಿತ್ಸೆ ಫಲಕಾರಿಯಾಗದೇ 7 ವರ್ಷದ ಮೂಗ ಸಾವನ್ನಪ್ಪಿದ್ದಾನೆ.


0 تعليقات

إرسال تعليق

Post a Comment (0)

أحدث أقدم