ಬೆಂಗಳೂರು: ಗಾಯಕಿ ಹರಿಣಿ ತಂದೆ ರಾಜಾನುಕುಂಟೆ ರೈಲ್ವೆ ಟ್ರ್ಯಾಕ್ನಲ್ಲಿ ಎಡಗೈ ನರ ಕಟ್ ಮಾಡಿಕೊಂಡು ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರಿಣಿ ಕನ್ನಡ, ತೆಲುಗು, ತಮಿಳು ಸೇರಿ ಹಲವಾರು ಭಾಷೆಗಳಲ್ಲಿ ಗಾಯಕಿಯಾಗಿದ್ದಾರೆ. ಕೋರಮಂಗಲ ನಿವಾಸಿಯಾಗಿರುವ ಎ.ಕೆ.ರಾವ್ ಅವರ ಜೇಬಿನಲ್ಲಿ ಆಧಾರ್ ಕಾರ್ಡ್ ಹಾಗೂ ತಮಗೆ ವಂಚನೆಯಾಗಿರುವ ಬಗ್ಗೆ ದಾಖಲಿಸಿರುವ ಕಂಪ್ಲೇಂಟ್ ಕಾಪಿ ಲಭ್ಯವಾಗಿದೆ.
ಎ.ಕೆ. ರಾವ್ ಶವದ ವೈದ್ಯಕೀಯ ಪರೀಕ್ಷೆಯಲ್ಲಿ ಆತ್ಮಹತ್ಯೆ ಸಾಬೀತಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
إرسال تعليق