ಬದಿಯಡ್ಕ: ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುವ ಅಮೃತಧಾರಾ ಗೋಶಾಲೆ, ಗೋಲೋಕ, ಬಜಕೂಡ್ಲುವಿನ ಗೋವುಗಳ ಮೇವಿಗಾಗಿ ಹಸಿ ಹುಲ್ಲು ಸಂಗ್ರಹಿಸುವ ಶ್ರಮದಾನವು ಭಾನುವಾರ (ನ.7) ಎಯ್ಯುರಮೂಲೆ ಶ್ಯಾಮ ಪ್ರಸಾದರ ಮನೆಯ ಪರಿಸರದಲ್ಲಿ ಗುರುವಂದನೆ, ಗೋವಂದನೆ ಮೂಲಕ ಜರಗಿತು.
ಮುಳ್ಳೇರಿಯಾ ಮಂಡಲ ಕುಂಬ್ಳೆ ವಲಯದ ಎಯ್ಯುರಮೂಲೆ ಶ್ಯಾಮ ಪ್ರಸಾದ ಭಟ್ ಇವರ ಹುಲ್ಲುಗಾವಲಿನಲ್ಲಿದ್ದ ಹುಲ್ಲನ್ನು ಬಜಕೂಡ್ಲು ಗೋಶಾಲೆಗೆ ಸಾಗಿಸಲಾಯಿತು.
ಕಾಮದುಘ ಕಾರ್ಯದರ್ಶಿ ಡಾ ವೈ ವಿ ಕೃಷ್ಣ ಮೂರ್ತಿ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ, ಗುರಿಕ್ಕಾರ ಮಹಾಬಲೇಶ್ವರ ಭಟ್ಟ, ಪಳ್ಳತ್ತಡ್ಕ ವಿದ್ಯಾರ್ಥಿವಾಹಿನೀ ಪ್ರಧಾನ ಈಶ್ವರ ಭಟ್, ಪೆರಡಾಲ ಶಿವರಾಮ ಭಟ್, ಶ್ರೀಮತಿ ಕೀರಣಮೂರ್ತಿ ಬದಿಯಡ್ಕ, ಶ್ರೀಮತಿ ಶಾಂತ ಬದಿಯಡ್ಕ, ಶ್ರೀಮತಿ ಪುಷ್ಪಲತಾ, ಕವಿತಾ, ಲಿಲಾವತಿ, ವಿದ್ಯಾರ್ಥಿಗಳಾದ ಶಂಕರ ತೇಜಸ್ವಿ, ಶ್ರಿರಾಮ ಶರ್ಮ ಎಡಕ್ಕಾನ, ಸುಧಾಮ ಶರ್ಮ, ಅದ್ವತ್ ಕೃಷ್ಣ, ವಿಶೇಶ್ ಶ್ರಮದಾನದಲ್ಲಿ ಭಾಗವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق