ಕುಲಾಲ ಸಮಾಜ ಬಾಂಧವರನ್ನು ಸರಕಾರ ಗುರುತಿಸಿರುವುದು ಅಭಿಮಾನ ತಂದಿದೆ; ಮಯೂರ್ ಉಳ್ಳಾಲ್
ಮಂಗಳೂರು: ದ.ಕ. ಜಿಲ್ಲಾ ಮೂಲ್ಯರ ಯಾನೇ ಕುಲಾಲರ ಮಾತೃ ಸಂಘದ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ ಬಿ.ಎಸ್. ಕುಲಾಲ್ ಅವರನ್ನು ದಿನಾಂಕ 7.11.21 ಆದಿತ್ಯವಾರದಂದು ಸಂಘದ ಅಧ್ಯಕ್ಷರಾಗಿರುವ ಮಯೂರ್ ಉಳ್ಳಾಲ್ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಬಿ.ಎಸ್ ಕುಲಾಲ್ ಮಾತನಾಡುತ್ತಾ ಸುದೀರ್ಘ ಕಾಲದಿಂದ ಪತ್ರಿಕೆಯಲ್ಲಿ ನನ್ನ ಕರ್ತವ್ಯದ ಸೇವೆಯನ್ನು ಮಾಡಿದ್ದೇನೆ ಪ್ರಶಸ್ತಿಗಾಗಿ ಯಾವುದೇ ರೀತಿಯ ಶಿಫಾರಸನ್ನು ಮಾಡಿಲ್ಲ ಮತ್ತು ಅರ್ಜಿಯನ್ನು ನೀಡಿಲ್ಲ ನನ್ನ ಪತ್ರಿಕಾ ಮಾಧ್ಯಮದ ಸೇವೆಯನ್ನು ಜಿಲ್ಲಾಡಳಿತ ಗುರುತಿಸಿದೆ ಇದು ಜಿಲ್ಲೆಯ ಸ್ವಾರ್ಥರಹಿತ ನಿಷ್ಠಾವಂತ ಪತ್ರಕರ್ತರಿಗೆ ಸಂದ ಗೌರವಾಗಿದೆ. ಸಮಾಜ ನನ್ನನ್ನು ಗುರುತಿಸಿರುವುದು ಅಭಿಮಾನ ತಂದಿದೆ ಎಂದು ನುಡಿದರು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು ಉಪಸ್ಥಿತರಿದ್ದು ಕುಲಾಲ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭೆಗಳಿಗೆ ಜಿಲ್ಲಾ ಕುಲಾಲರ ಮಾತೃ ಸಂಘ ಸಹಕಾರ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಾಲ್ ಮಾತೃ ಸಂಘದ ಅಧ್ಯಕ್ಷರಾದ ಮಯೂರ ಉಳ್ಳಾಲ್ ಅವರು ಮಾತನಾಡುತ್ತಾ ಮಾಧ್ಯಮ ಕ್ಷೇತ್ರದಲ್ಲಿ ಕುಲಾಲ ಸಮಾಜದ ಬಂಧುಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರ ಸೇವಾಕಾರ್ಯಗಳನ್ನು ಗುರುತಿಸುವ ಕೆಲಸ ಮುಂದಿನ ದಿನಗಳಲ್ಲಿ ಕುಲಾಲ ಸಂಘಗಳು ನಡೆಸುತ್ತದೆ. ಕುಲಾಲ ಸಮಾಜ ಬಾಂಧವರನ್ನು ಸರಕಾರ ಗುರುತಿಸಿರುವುದು ಅಭಿಮಾನ ತಂದಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಲಾಲ ಮಾತೃ ಸಂಘದ ಉಪಾಧ್ಯಕ್ಷರಾದ ಜಯಪ್ರಕಾಶ್, ಪುಂಡರೀಕಾಕ್ಷ (ಮುಡಿಪು ಸಂಘದ ಪ್ರತಿನಿಧಿ), ಚಂದ್ರಕಾಂತ (ಮಾತೃ ಸಂಘದ ಕಾರ್ಯದರ್ಶಿ), ಸದಾಶಿವ ಕುಲಾಲ್ (ಸಂಘಟನಾ ಕಾರ್ಯದರ್ಶಿ), ಪ್ರವೀಣ್ ಬಸ್ತಿ (ಕೊಲ್ಯ ಕುಲಾಲ ಸಂಘ ಅಧ್ಯಕ್ಷರು), ಸುಕುಮಾರ್ ಬಂಟ್ವಾಳ (ಕುಲಾಲ ಯುವ ವೇದಿಕೆ ಜಿಲ್ಲಾಧ್ಯಕ್ಷರು), ದಿನೇಶ್ ಕುಲಾಲ್ (ಮುಂಬಯಿ ಕರ್ನಾಟಕ ಮಲ್ಲ ಪತ್ರಿಕೆಯ ವರದಿಗಾರ), ಸತೀಶ್ ಸಂಪಾಜೆ (ವಿಜಯ ಕರ್ನಾಟಕ ಉದ್ಯೊಗಿ), ನವೀನ್ ಕುಲಾಲ್ (ಪುತ್ತೂರು ಕುಲಾಲ ಸಂಘ ಪ್ರತಿನಿಧಿ), ಕಿರಣ್ ಅಟ್ಲೂರು (ಸೇವಾದಳದ ದಳಪತಿ), ಪದ್ಮನಾಭ ವೇಣೂರು (ಪತ್ರಕರ್ತರು), ಧರಣಿ (ವಿಜಯ ಕರ್ನಾಟಕ ಉದ್ಯೊಗಿ), ಹಾಗೂ ಸೈಲೇಶ್ ನೆಟ್ಟಾರ್ (ಸುಳ್ಯ ಕುಲಾಲ ಸಂಘದ ಅಧ್ಯಕ್ಷರು) ಮತ್ತು ಪ್ರಸಾದ್ ಕುಲಾಲ್ ಸಿದ್ಧಕಟ್ಟೆ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق