ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಕ್ಕಬಳ್ಳಾಪುರ: ಕೊಳಾಲಮ್ಮ ದೇವಸ್ಥಾನದ ಪೂಜಾರಿ ಹಾಗೂ ಸೇವಕ ನಿಗೂಢ ಸಾವು

ಚಿಕ್ಕಬಳ್ಳಾಪುರ: ಕೊಳಾಲಮ್ಮ ದೇವಸ್ಥಾನದ ಪೂಜಾರಿ ಹಾಗೂ ಸೇವಕ ನಿಗೂಢ ಸಾವು

 


ಚಿಕ್ಕಬಳ್ಳಾಪುರ: ಪೂಜಾರಿ ಮತ್ತು ಪೂಜಾರಿ ಸೇವಕ ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯೊಂದು ಗುಟ್ಟಹಳ್ಳಿ ಗ್ರಾಮದ ಕೊಳಾಲಮ್ಮ ದೇವಸ್ಥಾನದಲ್ಲಿ ನಡೆದಿದೆ.

ಕೊಳಾಲಮ್ಮ ದೇವಿಯ ಪೂಜಾರಿ ಶ್ರೀಧರ್ 31ವರ್ಷ ಮತ್ತು ಲಕ್ಷ್ಮೀಪತಿ 33ವರ್ಷ ಮೃತರು. ಮೃತ ಲಕ್ಷ್ಮೀಪತಿ ಕೆ ಮುತ್ತಕದಳ್ಳಿ ಗ್ರಾಮದ ನಿವಾಸಿಯಾಗಿದ್ದ. ಇವರ ಸಾವು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಶ್ರೀ ಕ್ಷೇತ್ರ ಕೈವಾರ ಪಕ್ಕದಲ್ಲಿ ಕೊಳಾಲಮ್ಮ ದೇವಾಲಯವಿದೆ. ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم