ಬದಿಯಡ್ಕ: ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಪರಿಸರದಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡಿಬಂದು ಸಂಸ್ಥೆಯು ಅಭಿವೃದ್ದಿಯನ್ನು ಹೊಂದುತ್ತದೆ. ಊರಿನ ಜನರನ್ನು ಒಗ್ಗೂಡಿಸಿ ವಿವಿಧ ಸಮಿತಿಗಳ ಮೂಲಕ ಜವಾಬ್ದಾರಿಯನ್ನು ಹಂಚಿಕೊಂಡು ಉತ್ತಮ ಕಾರ್ಯಗಳಿಗೆ ಮುನ್ನಡಿಯಿಡಬೇಕು ಎಂದು ಹಿಂದು ಐಕ್ಯವೇದಿ ಕೇರಳ ರಾಜ್ಯ ಕಾರ್ಯಾಧ್ಯಕ್ಷ, ಪ್ರಖರ ವಾಗ್ಮಿ ವಲ್ಸನ್ ತಿಲ್ಲಂಗೇರಿ ಭಾನುವಾರ ಕನ್ನೆಪ್ಪಾಡಿ ಆಶ್ರಯ ವೃದ್ಧಾಶ್ರಮಕ್ಕೆ ಭೇಟಿಯಿತ್ತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರು.
ಆಶ್ರಮದ ಸಂಸ್ಥಾಪಕಿ ದಿ. ಶಾರದಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಗೋವುಗಳಿಗೆ ಗೋಗ್ರಾಸವನ್ನು ನೀಡಿ ಆಶ್ರಮದ ಹಿರಿಯ ಜೀವಗಳ ಕಾಲಿಗೆರಗಿ ಆಶೀರ್ವಾದವನ್ನು ಪಡೆದ ಅವರು ಸಂಸ್ಥೆಯ ಅಭಿವೃದ್ಧಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ಅವರನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ರಾಮಕೃಷ್ಣ ಹೆಬ್ಬಾರ್, ರಾಘವೇಂದ್ರ ಬದಿಯಡ್ಕ, ಗಣೇಶಕೃಷ್ಣ ಅಳಕ್ಕೆ, ರಾಜೇಶ್ ಮಾಸ್ತರ್ ಅಗಲ್ಪಾಡಿ ಹಾಗೂ ಆಶ್ರಮದ ಹಿತಚಿಂತಕರು ಈ ಸಂದರ್ಭದಲ್ಲಿ ಜೊತೆಗಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق